ಕಳೆದ ಒಂದು ವರ್ಷದಿಂದ ಮನಸ್ಸಿನಲ್ಲಿ ವಿಷಯವೊಂದನ್ನು ಅಡಗಿಸಿಕೊಂಡಿದ್ದ ಗಣಪತಿ ಹೆಗಡೆ ಆ ವಿಷಯವನ್ನು ಮನೆಯವರಿಗೂ ಹೇಳದೇ ಸಾವನಪ್ಪಿದ್ದಾರೆ.
ಶಿರಸಿ ಬಾಳೆಗದ್ದೆ ಶಿಂಗನಮನೆಯ ಗಣಪತಿ ಹೆಗಡೆ (63) ಕೃಷಿಕರು. ಒಂದು ವರ್ಷದಿಂದ ಅವರು ಯಾವುದೋ ಒಂದು ವಿಷಯವನ್ನು ಮನಸಿನಲ್ಲಿಟ್ಟುಕೊಂಡಿದ್ದರು. ಆ ವಿಷಯವನ್ನು ಅವರು ತಮ್ಮ ಪತ್ನಿ ಗೀತಾ ಹೆಗಡೆ ಅವರ ಬಳಿಯೂ ಹೇಳಿರಲಿಲ್ಲ. ಮಗ ಹರೀಶ ಹೆಗಡೆ ಪ್ರಶ್ನಿಸಿದರೂ ಬಾಯ್ಬಿಟ್ಟಿರಲಿಲ್ಲ.
ಈ ನಡುವೆ ಗಣಪತಿ ಹೆಗಡೆ ಅವರು ತೋಟಕ್ಕೆ ಹೊಡೆಯಲು ಕ್ರಿಮಿನಾಶಕವನ್ನು ತಂದಿದ್ದರು. ಫೆ 2ರಂದು ಅದೇ ಕ್ರಿಮಿನಾಶಕವನ್ನು ಅವರು ಕುಡಿದರು. ಇದನ್ನು ನೋಡಿದ ಕುಟುಂಬದವರು ಗಣಪತಿ ಹೆಗಡೆ ಅವರನ್ನು ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ಕರೆದೊಯ್ದರು.
ಆದರೆ, ಅಲ್ಲಿನ ಚಿಕಿತ್ಸೆಗೆ ಗಣಪತಿ ಹೆಗಡೆ ಸ್ಪಂದಿಸಲಿಲ್ಲ. ಫೆ 9ರ ರಾತ್ರಿ ಅವರು ಕೊನೆ ಉಸಿರೆಳೆದರು. ಮಾವನ ಸಾವಿನ ಸುದ್ದಿ ಕೇಳಿದ ಅವರ ಅಳಿಯ ಆಘಾತಕ್ಕೊಳಗಾದರು. ಸಿದ್ದಾಪುರ ಕರ್ಕಿಸಾವಲುವಿನಲ್ಲಿದ್ದ ಅವರ ಅಳಿಯ ಸಿದ್ದಾರ್ಥ ಹೆಗಡೆ ಈ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ ಕುಟುಂಬದವು ಶವ ಪಡೆದರು.