ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ ಶೇರಿಗಾರ್ ಆ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ಬೈಕಿನಲ್ಲಿದ್ದ ನಾಲ್ವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು!
ಅoಕೋಲಾ ತಾಲೂಕಿನ ಹೊನ್ನಳ್ಳಿ ಹತ್ತಿರ ಕೃಷ್ಣ ಗೌಡ ಅವರು ಚಲಾಯಿಸುತ್ತಿದ್ದ ಬೈಕಿಗೆ ಕಾರು ಗುದ್ದಿದೆ. ಕೃಷ್ಣ ಗೌಡ ಅವರು ತಮ್ಮ ಪತ್ನಿ ನಾಗಶ್ರೀ ಗೌಡ, ಅಣ್ಣನ ಮಗ ಸಂದೀಪ ಗೌಡ ಹಾಗೂ ಭಾವನ ಮಗ ಅಕ್ಷಯ ಗೌಡ ಜೊತೆ ಫೆ 13ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ಯಲ್ಲಾಪುರ ಕಡೆಯಿಂದ ಉಡುಪಿಯ ವೆಂಕಟೇಶ ಶೇರಿಗಾರ ಜೋರಾಗಿ ಕಾರು ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದರು.
ಮುಂದಿದ್ದ ವಾಹನ ಹಿಂದಿಕ್ಕುವ ಅವಸರದಲ್ಲಿ ಕಾರು ಬೈಕಿಗೆ ಗುದ್ದಿತು. ಇದರಿಂದ ಹೊಸ ಬೈಕು ಹಾಳಾಯಿತು. ಬೈಕಿನಲ್ಲಿದ್ದ ನಾಲ್ವರು ಗಾಯಗೊಂಡರು. ಈ ವಿಷಯ ಅರಿತ ಬೆಳಂಬಾರದ ಬಾಬು ಗೌಡ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಕಾರು ಚಾಲಕನ ವಿರುದ್ಧ ದೂರು ನೀಡಿದರು.