`ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಅತ್ಯಂತ ಸಹಾಯಕಾರಿಯಾಗಿದ್ದು, ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರೆ ನೀಡಿದ್ದಾರೆ.
`ಪತಂಜಲಿ ಮಹರ್ಷಿಗಳು ಯೋಗದ ಮಹತ್ವವನ್ನು ಕ್ರಿ.ಶ 5 ಶತಮಾನದಲ್ಲಿ ತಿಳಿಸಿಕೊಟ್ಟರು. ಮನುಷ್ಯನಿಗೆ ಸ್ವಾಭಾವಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವಂತ ದೊಡ್ಡ ಔಷಧಿ ಯೋಗವಾಗಿದೆ. ಹಿಂದಿನ ಕಾಲದಲ್ಲಿ ಯೋಗ ಮತ್ತು ಧ್ಯಾನವನ್ನು ಮಾಡಿಕೊಂಡು ಆಸ್ಪತ್ರೆಗೆ ಹೋಗದೆ ನೂರು ವರ್ಷಗಳ ಕಾಲ ಆರೋಗ್ಯ ವಂತರಾಗಿ ಜೀವನ ನಡೆಸುತ್ತಿದ್ದರು. ಇಂದಿನ ಕಾಲದಲ್ಲಿ ಆಸ್ಪತ್ರೆಗೆ ಹೋಗದೇ ಇರುವವರು ಯಾರು ಇಲ್ಲ. ಆದ್ದರಿಂದ ಯೋಗವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ಪ್ರತಿನಿತ್ಯ ಮಾಡುವುದರ ಮೂಲಕ ಆರೋಗ್ಯದ ಸ್ವಾಸ್ಥವನ್ನು ಕಾಪಾಡಿಕೊಳ್ಳಬೇಕು’ ಎಂದರು.
Discussion about this post