ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆಯಂತೆ ಹಾಡಲು ಶುರು ಮಾಡಿದ ದೀಪ್ತಿ ಭಟ್ಟ ಹಿಂತಿರುಗಿ ನೋಡಿದಿಲ್ಲ. ಸಾಧನೆಯ ಮೆಟ್ಟಿಲನ್ನು ಏರಿದ ಇವರು ಇದೀಗ ರಾಷ್ಟಮಟ್ಟದ ವೇದಿಕೆ ಸಹ ಗುರುತಿಸಿಕೊಂಡಿದ್ದಾರೆ.
ದೀಪ್ತಿ ಭಟ್ಟ ಹಾಲಿ ಬೆಂಗಳೂರಿನ ನಿವಾಸಿ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ದೀಪ್ತಿ ಭಟ್ಟ ಅವರ ಗಾಯನ ಗುರುತಿಸಿದ ಹಿಂದೂಸ್ತಾನಿ ಸಂಗೀತಗಾರ ರಘುನಂದನ್ ಭಟ್ ಮತ್ತು ಡಾ ಹರೀಶ್ ಹೆಗಡೆ ಅವರಿಗೆ ತರಬೇತಿ ನೀಡಿದ್ದಾರೆ. ಗಣೇಶ ದೇಸಾಯಿ ಹಾಗೂ ಸೂರ್ಯ ಉಪಾದ್ಯಾಯ ಹಾರ್ಮೋನಿಯಂ ಕಲಿಸಿದ್ದಾರೆ. ಬಾಲ್ಯದಿಂದಲೂ ಹಾಡುಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ನಿರಂತರ ಸಂಗೀತ ಅಬ್ಯಾಸದಲ್ಲಿ ತೊಡಗಿಸಿಕೊಂಡರು. ಸದ್ಯ ರಾಜ್ಯ ಹಾಗೂ ರಾಷ್ಟ ಮಟ್ಟದ ವೇದಿಕೆಗಳಲ್ಲಿ ದೀಪ್ತಿ ಭಟ್ಟ ಸಂಗೀತ ಪ್ರದರ್ಶನ ನೀಡಿದ್ದಾರೆ. ಆಳ್ವಾಸ್ ನುಡಿಸಿರಿ, ಬೆಂಗಳೂರು ಗಣೇಶ ಉತ್ಸವ, ವಿಶ್ವ ಹವ್ಯಕ ಸಮ್ಮೇಳನ ಮೊದಲಾದ ವೇದಿಕೆಗಳು ಅವರ ಕಂಠಸಿರಿಗೆ ತಲೆದೂಗಿವೆ. ಭಾರತ ವಿಕಾಸ್ ಪರಿಷತ್ ನಡೆಸಿದ ಕಾರ್ಯಕ್ರಮದಲ್ಲಿಯೂ ದೀಪ್ತಿ ಭಟ್ಟ ತನ್ನ ಪ್ರತಿಭೆ ತೋರಿಸಿದ್ದಾರೆ.
Discussion about this post