ಹಲಸಿನ ಹಣ್ಣಿನ ಮೌಲ್ಯವರ್ಧನೆಗಾಗಿ ಶಿರಸಿಯಲ್ಲಿ ಪ್ರತಿ ವರ್ಷ ಹಲಸಿನ ಮೇಳ ನಡೆಯುತ್ತದೆ.
ಈ ಬಾರಿ ಜೂ 29 ಹಾಗೂ 30ರಂದು ಹಲಸು ಮತ್ತು ಮಲೆನಾಡು ಮೇಳವನ್ನು ಎ.ಪಿ.ಎಮ್.ಸಿಯ ಸಾವಯವ ಒಕ್ಕೂಟದ ಕಛೇರಿಯ ಆಯೋಜಿಸಲಾಗಿದೆ. ಈ ಮೇಳದಲ್ಲಿ ಹಲಸಿನ ಮತ್ತು ಹಲಸಿನ ಬೀಜದ ವಿಶೇಷ ಖಾದ್ಯ ಸ್ಪರ್ಧೆ ನಡೆಯಲಿದ್ದು, ಆಸಕ್ತ ಮಹಿಳೆಯರು ಭಾಗವಹಿಸಬಹುದು. ಹಲಸಿನ ಸಾಂಪ್ರದಾಯಿಕ ವಿವಿಧ ಖಾದ್ಯಗಳ ಕ್ಯಾಂಟೀನ್ ಇರಲಿದ್ದು ರುಚಿಕರ ತಿಂಡಿ ತಿನಿಸುಗಳು ಮಾರಾಟಕ್ಕೆ ಲಭ್ಯವಿರಲಿದೆ. ವಿವಿಧ ತಳಿಯ ಹಲಸಿನ ಸಸಿಗಳ ಪ್ರದರ್ಶನ ಮತ್ತು ಮಾರಾಟವನ್ನೂ ಆಯೋಜಿಸಲಾಗಿದ್ದು, ಕೈ ತೋಟದಲ್ಲಿ ಬೆಳೆಸಿದ ನಾಟಿ ತರಕಾರಿ ಬೀಜಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಸೋಲಾರ್ ಆಧಾರಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಇನ್ನೊಂದು ವಿಶೇಷ. ಹಲಸಿನ ಮೌಲ್ಯವರ್ಧಿತ ಆಹಾರ ಉತ್ಪನ್ನ ತಯಾರಿಸುತ್ತಿರುವ ಜಿಲ್ಲೆಯ ಸ್ವಸಹಾಯ ಸಂಘ ಹಾಗೂ ಉದ್ದಿಮೆದಾರರು, ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ವಿಚಾರ ಸಂಕಿರಣ ಸಹ ನಡೆಯಲಿದೆ.
ಈ ಮೇಳದಲ್ಲಿ ಮಲೆನಾಡಿನ ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿದ್ದು, ಹಲಸಿನ ಹಾಗೂ ಹಲಸಿನ ಬೀಜದ ಖಾದ್ಯ ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಳ್ಳಲು ಜೂ. 27ರ ತನಕ ಅವಕಾಶವಿದೆ. ಹೆಸರು ನೋಂದಾವಣೆಗೆ 660553054 ಸಂಖ್ಯೆಗೆ ಕರೆ ಮಾಡಿದರೂ ಸಾಕು.
Discussion about this post