ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಇದೀಗ ಅನಾರೋಗ್ಯ ಕಾಡುತ್ತಿದೆ.
ಈ ಕೇಂದ್ರ ಅಕ್ರಮ ಚಟುವಟಿಕೆಯ ತಾಣವಾಗಿದೆ. ಗುರುತು ಪರಿಚಯ ಇಲ್ಲದ ಅನೇಕರು ಇಲ್ಲಿ ಆಗಮಿಸಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದಾರೆ. ಸೂಕ್ತ ಭದ್ರತೆಯೂ ಇಲ್ಲ, ಗೋಡೆಯೂ ಇಲ್ಲ ಎಂಬAತಾಗಿದ್ದರಿAದ ಕಾರಣ ಅಲ್ಲಿ ಬರುವವರನ್ನು ಪ್ರಶ್ನಿಸುವವರೂ ಇಲ್ಲ. ಪ್ರಸ್ತುತ ಕಟ್ಟಡದ ಚಾವಣಿ ಸಂಪೂರ್ಣ ತೆರೆದುಕೊಂಡಿದ್ದು ಗೋಡೆಗಳು ಮಾತ್ರ ಜೀವಂತವಾಗಿದೆ. ನೆಲ ಸಂಪೂರ್ಣ ನುಜ್ಜುಗುಜ್ಜಾಗಿದೆ. 20 ಹೆಚ್ಚು ಕೋಣೆಗಳನ್ನು ಹೊಂದಿರುವ ಐದಾರು ನಿರುಪಯುಕ್ತ ಕಟ್ಟಡಗಳು ಪಾಳು ಬಿದ್ದಿವೆ.
ಎರಡು ತಿಂಗಳ ಹಿಂದೆ ಹರ್ಷ ನಾಯ್ಕ ಎಂಬಾತನನ್ನು ಆರೇಳು ಜನರ ದಾಂಡಿಗರ ದಂಡು ಅಪಹರಿಸಿ ಇದೆ ಜಾಗಕ್ಕೆ ಕರೆದುಕೊಂಡು ಬಂದು ಮಾರಣಾಂತಿಕ ಹಲ್ಲೆ ಮಾಡಿತ್ತು. ನಂತರ ಹಲ್ಲೆ ಮಾಡಿದ್ದ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಮೇಲೆ ಈಗಲೂ ಕಾನೂನು ವಿಚಾರಣೆ ನಡೆಯುತ್ತಿದೆ. ಈ ಸ್ಥಳವು ಬಹುತೇಕ ನಿರ್ಜನ ಪ್ರದೇಶವಾಗಿದ್ದರಿಂದ ದುರುಳರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
Discussion about this post