ಶಿರಸಿ: ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳನ್ನ ನಿಯಂತ್ರಣ ಮಾಡುವಂತೆ ಶಿರಸಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಸಹಾಯಕ ಆಯುಕ್ತರು, ಡಿವೈಎಸ್‌ಪಿ ಹಾಗೂ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಸುಭಾಷ್ ಚಂದ್ರ ಬೋಸ್ ಸಂಕೀರ್ಣ ಹಾಗೂ ದೇವಿ ಕೆರೆ ಉದ್ಯಾನವನದಲ್ಲಿ ಕಾಲೇಜು ವಿದ್ಯಾರ್ಥಿಗಳು ಗಾಂಜಾ, ಸಿಗರೇಟ್ ಸೇವನೆ ಸೇರಿದಂತೆ ಯುವಕ ಯುವತಿಯರು ಅಶ್ಲೀಲವಾಗಿ ಹಾಗೂ ಅಸಭ್ಯವಾಗಿ ವರ್ತಿಸುತಿದ್ದ ಮಾದ್ಯಮದಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನು ನೋಡಿದ ಶಿರಸಿ ಮಹಿಳಾ ಸ್ವಾಂತನ ಕೇಂದ್ರದ ಸದಸ್ಯರು ವಿದ್ಯಾರ್ಥಿಗಳ ಹಾಗೂ ಪಾಲಕರ ಹಿತ ದೃಷ್ಟಿಯಿಂದ ಮಾದಕ ದ್ರವ್ಯ ಸೇವನೆ ವಿರುದ್ಧ ತಿರುಗಿ ಬಿದ್ದಿದ್ದು, ನಿಯಂತ್ರಣಕ್ಕೆ ಆಗ್ರಹಿಸಿದ್ದಾರೆ.
Discussion about this post