ಕಳೆದ 35 ವರ್ಷಗಳಿಂದ ಗೋಕರ್ಣದಿಂದ ಪಂಡರಾಪುರಕ್ಕೆ ಪಾದಯಾತ್ರೆ ನಡೆಯುತ್ತಿದೆ.
ಇದನ್ನು ಆಷಾಢ ದಿಂಡಿಯಾತ್ರೆ ಎಂದು ಕರೆಯುತ್ತಾರೆ. ಈ ಬಾರಿ 36ನೇ ವರ್ಷದ ಯಾತ್ರೆಗೆ ಚಾಲನೆ ದೊರೆತಿದೆ. ಮುಂಡಗೋಡ, ಹಳಿಯಾಳ, ಬೆಳಗಾವಿ, ಸವದತ್ತಿ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಗೋಕರ್ಣಕ್ಕೆ ಆಗಮಿಸುತ್ತಾರೆ. ಇಲ್ಲಿಂದ ಒಂದು ತಿಂಗಳವರೆಗೆ ಕಾಲ್ನಡಿಗೆಯಲ್ಲಿ ನಡೆದು ಆಷಾಢ ಏಕಾದಶಿಯ ದಿನ ಶ್ರೀಕ್ಷೇತ್ರ ಪಂಡರಾಪುರಕ್ಕೆ ತೆರಳುತ್ತಾರೆ. ಒಂದು ತಿಂಗಳವರೆಗೂ ಕಾಲ್ನಡಿಗೆಯ ಮೂಲಕ ತೆರಳುವ ವೇಳೆ ತಂಬೂರಿ ನುಡಿಸುತ್ತ, ದೇವರ ನಾಮಸ್ಮರಣೆ ಮಾಡುತ್ತ ಸಾಗುವುದು ವಿಶೇಷ. ಭಜನೆ, ದೇವರ ಧ್ಯಾನದಲ್ಲಿ ಭಕ್ತರು ಆಯಾಸ ಮರೆಯುತ್ತಾರೆ.
Discussion about this post