ಹೊನ್ನಾವರ: ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಹೊನ್ನಾವರದ ಅನೇಕ ಕಾಂಗ್ರೆಸಿಗರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಸದಸ್ಯತ್ವ ಹೊಂದದೆ ಇದ್ದವರಿಗೆ ಪಕ್ಷದಲ್ಲಿ ಸ್ಥಾನ ನೀಡುತ್ತಿರುವುದನ್ನು ಅವರೆಲ್ಲರೂ ವಿರೋಧಿಸಿದ್ದಾರೆ. `ಈ ಹಿಂದೆ ಬಿಜೆಪಿ ಪಕ್ಷದವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾರೆ ಎಂದು ನಾವು ಆರೋಪ ಮಾಡುತ್ತಿದ್ದೇವು. ಆದರೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿಯು ಸರ್ವಾಧಿಕಾರಿ ಧೋರಣಿ ಅನುಸರಿಸುತ್ತಿದೆ’ ಎಂದು ಕಾರ್ಯಕರ್ತರು ಕಿಡಿಕಾರಿದರು. ಈಚೆಗೆ ಪಕ್ಷಕ್ಕೆ ಬಂದವರಿAದ ಮೂಲ ಕಾಂಗ್ರೆಸ್ಸಿಗರಿಗೆ ಹಿನ್ನಡೆಯಾಗಿದೆ ಎಂದು 35ಕ್ಕೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ.
Discussion about this post