ಹಳಿಯಾಳದ ಮೂವರು ಕುಸ್ತಿಪಟುಗಳು 2024-25ನೇ ಸಾಲಿನ ಅಂತರ್ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಆ ಮೂಲಕ ಅವರು ಖೇಲೋ ಇಂಡಿಯಾ ಯೂನಿವರ್ಸಿಟಿಯ ರಾಷ್ಟ್ರೀಯ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಂಜುನಾಥ್ ನಾಗೇಂದ್ರ ಗೌಡಪ್ಪನವರ್ 79ಕೆಜಿ ವಿಭಾಗ, ಗಾಯತ್ರಿ ರಮೇಶ್ ಸುತಾರ್ 59ಕೆಜಿ ವಿಭಾಗ ಮತ್ತು ಶಾಲಿನಾ ಸಿದ್ದಿ 57ಕೆಜಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಅವರ ಯಶಸ್ಸು ಹಳಿಯಾಳ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಸ್ತಿ ಕ್ರೀಡಾ ವಲಯದ ಹೆಮ್ಮೆ ಹೆಚ್ಚಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ರಾಜ್ಯ ಮತ್ತು ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಲಿ ಎಂದು ಅನೇಕರು ಹಾರೈಸಿದ್ದಾರೆ.