ಅನಾರೋಗ್ಯಕ್ಕೆ ಒಳಗಾಗಿ ಸಾವನಪ್ಪಿದ ಪತಿಯ ನೆನಪಿನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಟಾದ ಹಳೆ ಮೀನು ಮಾರುಕಟ್ಟೆ ಬಳಿ ಪ್ರದೀಪ ಮುರುಡೇಶ್ವರ ಹಾಗೂ ಜ್ಯೋತಿ ಮುರುಡೇಶ್ವರ ವಾಸವಾಗಿದ್ದರು. ಅನಾರೋಗ್ಯಕ್ಕೆ ಒಳಗಾದ ಪ್ರದೀಪ ಮುರುಡೇಶ್ವರ ಅವರಿಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಎರಡು ತಿಂಗಳ ಹಿಂದೆ ಸಾವನಪ್ಪಿದ್ದರು. ಅವರ ಪತ್ನಿ ಜ್ಯೋತಿ ಮುರುಡೇಶ್ವರ (45) ಇದೇ ನೋವಿನಲ್ಲಿದ್ದರು.
ಜ್ಯೋತಿ ಮುರುಡೇಶ್ವರ ಸಹ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಒಮ್ಮೆ ಪೌರ ಕಾರ್ಮಿಕ ಗಣೇಶ ಹರಿಜನ ಅವರನ್ನು ರಕ್ಷಿಸಿದ್ದರು. ನಂತರ ಜ್ಯೋತಿ ಅವರಿಗೆ ಬುದ್ದಿವಾದ ಹೇಳಿ ಅವರ ಮನೆಯಲ್ಲಿಯೇ ಆಶ್ರಯ ನೀಡಿದ್ದರು. ಮಾನಸಿಕ ನೋವು ಅನುಭವಿಸುತ್ತಿದ್ದ ಜ್ಯೋತಿ ಮುರುಡೇಶ್ವರ ಫೆ 28ರಂದು ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸಿ, ಸಾವನಪ್ಪಿದರು.
ಸಾವಿಗೂ ಮುನ್ನ ಅವರು `ನನ್ನ ಸಾವಿಗೆ ನಾನೇ ಕಾರಣ’ ಎಂದು ಚೀಟಿ ಬರೆದಿದ್ದಾರೆ. ಮಲಗುವ ಕೋಣೆಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ. ಕುಮಟಾ ಪೊಲೀಸ್ ಠಾಣೆಯ ಎಎಸ್‌ಐ ಮರಿಯಾಂಬಿ ಮಲೀಮ್ ಉಸ್ಮಾನ್ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.