ಘoಟೆ ಗಣಪನ ಸನ್ನಿಧಿಯಲ್ಲಿ ಶುಕ್ರವಾರ ಸಡಗರದ ವಾತಾವರಣ. ಮಾತೆಯರಿಂದ ಭಜನೆ, ಬುದ್ದಿಜೀವಿಗಳಿಂದ ಪ್ರವಚನ, ವೈದಿಕರಿಂದ ವೇದಘೋಷ ಪಠಣ, ಕಲಾವಿದರಿಂದ ತಾಳಮದ್ದಲೆ ಸೇರಿ ಬಗೆ ಬಗೆಯ ಕಾರ್ಯಕ್ರಮಗಳೊಂದಿಗೆ ಚಂದ್ಗುಳಿಯ ಆವರಣ ಭಕ್ತಿ-ಭಾವದಿಂದ ಕೂಡಿತ್ತು.
ಫೆ 28ರಿಂದ ಮಾರ್ಚ 3ರವರೆಗೆ ಯಲ್ಲಾಪುರದ ಚಂದ್ಗುಳಿ ಗಂಟೆ ಗಣಪತಿ ಸನ್ನಿಧಿಯಲ್ಲಿ ಸಿದ್ಧಿ ವಿನಾಯಕ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿದೆ. ಈ ಹಿನ್ನಲೆ ಹಲವು ಬಗೆಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶುಕ್ರವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ನೂರಾರು ಭಕ್ತರು ಭಾಗವಹಿಸಿದ್ದರು.
ಇಷ್ಟಾರ್ಥ ಸಿದ್ಧಿಯಿಂದ ಪ್ರಸಿದ್ಧಿ ಪಡೆದಿರುವ ಗಂಟೆ ಗಣಪನ ಉತ್ಸವಕ್ಕೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ನೂರಾರು ಮಹಿಳೆಯರು ಭಗವದ್ಗೀತೆ ಪಠಿಸಿದರು. ವಿಷ್ಣು ಸಹಸ್ರನಾಮ ಓದಿ ಹೇಳಿದರು. 36 ಗಣೇಶನ ವಿಗ್ರಹಗಳ ಕೆತ್ತನೆ ನೋಡಿ ಭಕ್ತಿ-ಭಾವದಿಂದ ಕೈ ಮುಗಿದರು. ಸಂಜೆ ನಡೆದ ತಾಳಮದ್ದಲೆ ಕಾರ್ಯಕ್ರಮವನ್ನು ಭಕ್ತರು ಅನುಭವಿಸಿದರು