ಅರಣ್ಯವಾಸಿಗಳಿಗೆ ಕಾನೂನು ಮಾಹಿತಿ ಮತ್ತು ಜಾಗೃತೆ ಮೂಡಿಸುವ ಉದ್ದೇಶದಿಂದ ನಡೆಯುತ್ತಿರುವ ಜಾಗೃತಿ ಜಾಥಾ ಸೋಮವಾರ ಕುಮಟಾ ತಾಲೂಕಿನಲ್ಲಿ ಸಂಚರಿಸಲಿದೆ. ಮಿರ್ಜಾನಿನ ಅಂಬೇಡ್ಕರ ಭವನದ ಎದುರು ಅಂದು ಬೆಳಗ್ಗೆ 10 ಗಂಟೆಗೆ ಜಾಥಾ ನಡೆಯಲಿದೆ.
ಸಂಘಟನೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು ಈ ಬಗ್ಗೆ ಮಾಹಿತಿ ನೀಡಿದ್ದು, `ಅರಣ್ಯವಾಸಿಗಳ ಮಂಜೂರಿ ಸಂಬoಧಪಟ್ಟoತೆ ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನುನಾತ್ಮಕ ಸಮಸ್ಯೆಗಳನ್ನ ಎದುರಿಸುತ್ತಿರುವ ಹಿನ್ನಲೆಯಲ್ಲಿ ಈ ಜಾಥಾ ಆಯೋಜಿಸಲಾಗಿದೆ. ಕಾನೂನು ಅಜ್ಞಾನದಿಂದ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿನಿಂದ ವಂಚಿತರಾಗಬಾರದೆoಬ ಉದ್ದೇಶದಿಂದ ರಾಜ್ಯಾದಂತ ಜಾಗೃತಾ ಕಾರ್ಯಕ್ರಮ ನಡೆಯಲಿದೆ’ ಎಂದಿದ್ದಾರೆ.
`ಕಾನೂನು ಜಾಗೃತಾ ಜಾಥಾದಲ್ಲಿ ಕಾನೂನು ಅಂಶಕ್ಕೆ ಸಂಬAಧಿಸಿ ಕರಪತ್ರ ವಿತರಿಸಲಾಗುತ್ತದೆ. ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಲಿದ್ದಾರೆ’ ಎಂದವರು ಹೇಳಿದ್ದಾರೆ.