ಗೋಕರ್ಣ ಸಮೀಪದ ಚೌಡಗೇರಿ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಅಂಚಿನಲ್ಲಿ ಮುರಿದು ಬಿದ್ದ ಮರಕ್ಕೆ ಬೈಕ್ ಗುದ್ದಿದೆ. ಪರಿಣಾಮ ಭಟ್ಕಳ ಮೂಲದ ಬೈಕ್ ಸವಾರ ಅಕ್ರಂ ಅನ್ಸಾರಿ ಸಾವನಪ್ಪಿದ್ದಾರೆ.
ಟೈಲ್ಸ ಕೆಲಸ ಮಾಡಿಕೊಂಡಿದ್ದ ಅಕ್ರಂ ಅನ್ಸಾರಿ (24) ಇಲ್ಲಿನ ನೆಲಗುಣಿಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗೆ ಕುಮಟಾ ಕಡೆಯಿಂದ ಜೋರಾಗಿ ಬೈಕ್ ಓಡಿಸಿಕೊಂಡು ಬಂದಿದ್ದರು. ಬೈಕ್ ನಿಯಂತ್ರಣ ತಪ್ಪಿ ರಸ್ತೆ ಅಂಚಿಗೆ ಸರಿದಿದ್ದು, ಅಲ್ಲಿ ಬಿದ್ದಿದ್ದ ಮರಕ್ಕೆ ಡಿಕ್ಕಿಯಾಯಿತು. ಮರದ ಅಡಿ ಬೈಕ್ ಸಿಲುಕಿಕೊಂಡಿತು.
10 ನಿಮಿಷಗಳ ಕಾಲ ಮರದಡಿ ಸಿಲುಕಿದ್ದ ಅಕ್ರಂ ಅನ್ಸಾರಿ ಆ ಮಾರ್ಗದಲ್ಲಿ ಸಂಚರಿಸುವವರ ನೆರವು ಯಾಚಿಸಿದ್ದಾರೆ. ರಕ್ತದ ಮಡುವಿನಲ್ಲಿದ್ದ ಅಕ್ರಂ ನೋಡಿದ ಜನರು ಕಂಗಾಲಾಗಿದ್ದಾರೆ. ಅದಾದ ನಂತರ ಸುಧಾರಿಸಿಕೊಂಡು ಪೆಟ್ರೋಲ್ ಬಂಕಿನವರೆಗೆ ಅಕ್ರಂ ಅನ್ಸಾರಿ ನಡೆದು ಬಂದಿದ್ದಾರೆ. ಮುಂಜಾನೆ 4.30ರ ಆಸುಪಾಸಿನಲ್ಲಿ ಈ ಅಪಘಾತ ನಡೆದಿದ್ದು, ಅದಾದ ಕೆಲ ಸಮಯದ ನಂತರ ಅಕ್ರಂ ಸಾವನಪ್ಪಿದ್ದಾರೆ.
ರಸ್ತೆ ಅಂಚಿನಲ್ಲಿ ಬಿದ್ದ ಮರದ ಟೊಂಗೆ ಬೈಕ್ ಸವಾರನ ತಲೆಗೆ ಬಡಿದ ಪರಿಣಾಮ ಈ ಸಾವು ಉಂಟಾಗಿದೆ. ಮರದ ಕೊಂಬೆ ತಲೆಗೆ ಚುಚ್ಚಿದ್ದರಿಂದ ಸಾಕಷ್ಟು ರಕ್ತಸ್ರಾವವೂ ಆಗಿದೆ. ಈ ಹಿನ್ನಲೆ ಅಪಾಯಕಾರಿ ಮರ ತೆರವು ಮಾಡುವಂತೆ ಅಲ್ಲಿನವರು ಆಗ್ರಹಿಸಿದ್ದಾರೆ.




