ಕುಮಟಾ: ಹರಕಡೆಯ ಸುಶೀಲಾ ಶಿವು ಅಂಬಿಗ (65) ಎಂಬಾತರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿದ್ದಾಳೆ
ಕೂಲಿ ಕೆಲಸ ಮಾಡುತ್ತಿದ್ದ ಆಕೆ ಕೆಲಸ ಮುಗಿಸಿ ಮನೆಗೆ ಬರುವಾಗ ಬೇಲಿ ಅಂಚಿನಲ್ಲಿ ತೆಂಗಿನಕಾಯಿ ಬಿದ್ದಿದ್ದನ್ನು ಕಂಡಿದ್ದು, ಅದನ್ನು ಹೆಕ್ಕಲು ಹೋಗಿದ್ದಳು. ಅಲ್ಲಿನ ಬೇಲಿಯಲ್ಲಿ ಹರಿದ ವಿದ್ಯುತ್ ಆಕೆಯ ಜೀವವನ್ನು ಬಲಿ ಪಡೆದಿದೆ. ಬೇಲಿಗೆ ದುಷ್ಕರ್ಮಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ ಅನುಮಾನಗಳಿವೆ. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.




Discussion about this post