6
  • Latest
A girl from Yellapur became a District Magistrate before studying for IAS!

IAS ಓದುವ ಮುನ್ನ ಜಿಲ್ಲಾಧಿಕಾರಿಯಾದ ಯಲ್ಲಾಪುರದ ಹುಡುಗಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

IAS ಓದುವ ಮುನ್ನ ಜಿಲ್ಲಾಧಿಕಾರಿಯಾದ ಯಲ್ಲಾಪುರದ ಹುಡುಗಿ!

ಸಣ್ಣ ಸಮಯ, ಸಣ್ಣ ನಂಬಿಕೆ, ಸಣ್ಣ ಭರವಸೆ! ಕನಸುಗಳು ಕಾಯುತ್ತಿವೆ

AchyutKumar by AchyutKumar
in ದೇಶ - ವಿದೇಶ
A girl from Yellapur became a District Magistrate before studying for IAS!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತಮ್ಮ ಜಿಲ್ಲಾಧಿಕಾರಿ ಆಸನವನ್ನು ಯಲ್ಲಾಪುರದ ಸುದೀಪ್ತ ಅತ್ತರವಾಲ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಕೆಲಕಾಲ ಜಿಲ್ಲಾಧಿಕಾರಿಗಳ ಆಸನದಲ್ಲಿ ಕೂತ ವಿದ್ಯಾರ್ಥಿನಿ ತಾನೂ ಜಿಲ್ಲಾಧಿಕಾರಿಯಾಗುವ ಬಯಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.

ADVERTISEMENT

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ನಡೆದಿತ್ತು. ಇದರ ಉದ್ಘಾಟನೆಗೆ ಕಾರವಾರ ಬಾಡದ ಮೆಟ್ರಿಕ್ ಪೂರ್ವ ಬಾಲಕಿಯರ್ ಹಾಸ್ಟೆಲ್ ವಿದ್ಯಾರ್ಥಿನಿಯರು ಆಗಮಿಸಿದ್ದರು. ಅವರೆಲ್ಲರೂ ಉತ್ಸಾಹದಿಂದ ಜಿಲ್ಲಾಧಿಕಾರಿಯನ್ನು ಭೇಟಿಯಾದರು. ವಿದ್ಯಾರ್ಥಿನಿಯರೊಂದಿಗೆ ಅವರ ವಿದ್ಯಾಭ್ಯಾಸದ ಬಗ್ಗೆ ಲಕ್ಷ್ಮೀಪ್ರಿಯಾ ವಿಚಾರಿಸಿದರು. `ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ?’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಅಲ್ಲಿದ್ದ ವಿದ್ಯಾರ್ಥಿನಿಯರು, ಡಾಕ್ಟರ್, ಲಾಯರ್, ಇಂಜಿನಿಯರ್ ಆಗುವ ಆಸೆ ವ್ಯಕ್ತಪಡಿಸಿದರು. ಯಲ್ಲಾಪುರ ರವೀಂದ್ರ ನಗರದ 8ನೇ ತರಗತಿ ವಿದ್ಯಾರ್ಥಿನಿ ಸುದೀಪ್ತ ಶಂಕರ್ ಅತ್ತರವಾಲ್ ಅವರು `ನಾನು ನಿಮ್ಮ ಹಾಗೇ ಡೀಸಿ ಆಗಬೇಕು. ಅದಕ್ಕೆ ಏನು ಓದಬೇಕು?’ ಎಂದು ಮುಗ್ದವಾಗಿ ಪ್ರಶ್ನಿಸಿದರು. `ನೀನು ಇನ್ನೂ ಚಿಕ್ಕವಳಿದ್ದೀಯಾ. ಈಗಿನಿಂದಲೇ ಚೆನ್ನಾಗಿ ಓದು. ದಿನಪತ್ರಿಕೆಗಳನ್ನು ಓದಿ ಹೆಚ್ಚಿನ ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕು. ಪದವಿ ಶಿಕ್ಷಣದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಅಗತ್ಯ ತರಬೇತಿ ಪಡೆದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆಗ ಡೀಸಿ ಆಗಲು ಸಾಧ್ಯ. ಇದಕ್ಕಾಗಿ ನಿರಂತರ ಶ್ರಮ ಪಡಬೇಕು’ ಎಂದು ಲಕ್ಷ್ಮೀಪ್ರಿಯಾ ಮನವರಿಕೆ ಮಾಡಿದರು. `ಜಿಲ್ಲಾಧಿಕಾರಿಯಾಗುವ ನಿನ್ನ ಕನಸನ್ನು ನನಸು ಮಾಡಿಕೊಳ್ಳಲು ಯಾವುದೇ ಸಂದರ್ಭದಲ್ಲೂ ಗುರಿಯಿಂದ ಹಿಂದೆ ಸರಿಯಬಾರದು‘ ಎಂಬ ಕಿವಿಮಾತನ್ನು ಹೇಳಿದರು. `ನಿನ್ನ ಕನಸಿಗೆ ನನ್ನಿಂದ ಈಗಿನಿಂದಲೇ ಪ್ರೇರಣೆ ಸಿಗಲಿ’ ಎನ್ನುತ್ತ ತಾವು ಕೂತಿದ್ದ ಖುರ್ಚಿಯಿಂದ ಇಳಿದು ಆ ವಿದ್ಯಾರ್ಥಿಯನ್ನು ಜಿಲ್ಲಾಧಿಕಾರಿ ಖುರ್ಚಿ ಮೇಲೆ ಕೂರಿಸಿದರು.

Advertisement. Scroll to continue reading.

ಜಿಲ್ಲಾಧಿಕಾರಿ ಖುರ್ಚಿಯ ಮೇಲೆ ಕುಳಿತ ಸುದೀಪ್ತ ಶಂಕರ್ ಅತ್ತರವಾಲ್ ಅಲ್ಲಿನ ಹೊಣೆಗಾರಿಕೆ-ಜವಾಬ್ದಾರಿಗಳ ಬಗ್ಗೆ ತಿಳಿದುಕೊಂಡರು. ಕೆಲ ಕಾಲ ಆ ಖುರ್ಚಿ ಮೇಲೆ ಕುಳಿತು ಖುಷಿ ಅನುಭವಿಸಿದರು. ಅಲ್ಲಿದ್ದ ವಿದ್ಯಾರ್ಥಿನಿಯರ ಜೊತೆ ಡೀಸಿ ಫೋಟೋ ತೆಗೆಸಿಕೊಂಡರು. `ಜಿಲ್ಲಾಧಿಕಾರಿ ಖುರ್ಚಿಯ ಮೇಲೆ ಕೂತಿದ್ದರಿಂದ ಜೀವನದ ಬಗ್ಗೆ ಸ್ಪಷ್ಟ ಗುರಿ ಸಿಕ್ಕಿದೆ. ಎಷ್ಟೇ ಕಷ್ಟವಾದರೂ ನಾನು IAS ಓದುವೆ’ ಎಂದು ಸುದೀಪ್ತ ಪ್ರತಿಕ್ರಿಯಿಸಿದರು. `ಸಣ್ಣ ಸಮಯ, ಸಣ್ಣ ನಂಬಿಕೆ, ಸಣ್ಣ ಭರವಸೆ! ಕನಸುಗಳು ಕಾಯುತ್ತಿವೆ‘ ಎಂದು ವಿದ್ಯಾರ್ಥಿನಿಯರ ಜೊತೆಗಿನ ಫೋಟೋವನ್ನು ಡೀಸಿ ಲಕ್ಷ್ಮೀಪ್ರಿಯಾ ಅವರು ತಮ್ಮ ವಾಟ್ಸಪ್ ಸ್ಟೇಟಸ್ ಮೂಲಕ ಹಂಚಿಕೊ0ಡಿದ್ದಾರೆ.

Advertisement. Scroll to continue reading.
Previous Post

ಹೋರಾಟಗಾರ್ತಿಯ ಮನವಿ ಆಲಿಸಿದ KAS ಅಧಿಕಾರಿ: ತಡರಾತ್ರಿಯ ಹೋರಾಟಕ್ಕೆ ತಾತ್ಕಾಲಿಕ ತಡೆ!

Next Post

ಸಿದ್ದು ಲೆಕ್ಕ: ಈ ಬಜೆಟಿನಲ್ಲಿ ಉತ್ತರ ಕನ್ನಡಕ್ಕೆ ಸಿಕ್ಕಿದ್ದೇನು?

Next Post
Sidhu's calculation What did Uttara Kannada get in this budget

ಸಿದ್ದು ಲೆಕ್ಕ: ಈ ಬಜೆಟಿನಲ್ಲಿ ಉತ್ತರ ಕನ್ನಡಕ್ಕೆ ಸಿಕ್ಕಿದ್ದೇನು?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ