ಹೋಳಿ ಹಬ್ಬ, ಕಾಮದಹನ ಹಾಗೂ ರಂಗ ಪಂಚಮಿ ಹಿನ್ನಲೆ ಜಿಲ್ಲೆಯ ಹಲವು ಕಡೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹಬ್ಬದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಬಾರ್ ಹಾಗೂ ವೈನ್ ಶಾಪ್ ಬಾಗಿಲು ಮುಚ್ಚುವಂತೆ ಸೂಚಿಸಲಾಗಿದೆ. ಶಿರಸಿ ಶಹರ ಮತ್ತು ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 12ರಂದು ಬೆಳಗ್ಗೆ 6 ಗಂಟೆಯಿoದ ಮಾರ್ಚ್ 15ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯದ ಮಳಿಗೆ ಬಾಗಿಲು ಹಾಕುವುದು ಕಡ್ಡಾಯವಾಗಿದೆ.
ದಾಂಡೇಲಿ, ಹಳಿಯಾಳ, ಜೋಯಿಡಾ ಕಾರವಾರ ಅಂಕೋಲಾ, ಭಟ್ಕಳ, ಹೊನ್ನಾವರ, ಸಿದ್ದಾಪುರ ತಾಲೂಕಿನಲ್ಲಿ ಮಾರ್ಚ 13ರಂದು ಬೆಳಗ್ಗೆ 6ಗಂಟೆಯಿoದ ಮಾರ್ಚ 15ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ತಡೆ ಒಡ್ಡಲಾಗಿದೆ. ಕುಮಟಾದಲ್ಲಿ ಸಹ ಮಾರ್ಚ 13ರ ಬೆಳಗ್ಗೆ 6 ಗಂಟೆಯಿoದ ಮಾರ್ಚ್ 15ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ.
ಇನ್ನೂ ಯಲ್ಲಾಪುರ ತಾಲೂಕಿನಲ್ಲಿ ಮಾರ್ಚ 14ರಂದು ಬೆಳಗ್ಗೆ 6 ಗಂಟೆಯಿpದ ಮಾರ್ಚ 16ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಮಾಡುವ ಹಾಗಿಲ್ಲ. ಮುಂಡಗೋಡದಲ್ಲಿ ಮಾರ್ಚ 19ರಂದು ಬೆಳಗ್ಗೆ 6 ಗಂಟೆಯಿoದ ಮಾರ್ಚ 20ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.