ಸೆಂಟ್ರಿ0ಗ್ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಮಟಾದ ಗಣೇಶ ಹುಲಸ್ವಾರ ಶವ ಕೊಳಚೆ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ.
ಕುಮಟಾ ಮಾದನಗೇರಿಯ ಹೊಸನಗರದ ಗಣೇಶ ಹುಲಸ್ವಾರ್ (32) ಮಾರ್ಚ 4ರಂದು ಕಾಣೆಯಾಗಿದ್ದರು. ಕೆಲಸಕ್ಕಾಗಿ ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದ ಅವರು ನಂತರ ಯಾರಿಗೂ ಕಾಣಿಸಿರಲಿಲ್ಲ. ಮಾರ್ಚ 10ರಂದು ಕುಮಟಾ ವರದಾ ಹೊಟೇಲ್ ಹತ್ತಿರದ ರೈಲ್ವೆ ಸೇತುವೆ ಅಡಿಭಾಗ ಅವರ ಶವ ಕಾಣಿಸಿದೆ.
ಆ ದಿನ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟ ಗಣೇಶ ಹುಲಸ್ವಾರ್ ಸರಾಯಿ ಕುಡಿಯಲು ಶುರು ಮಾಡಿದರು. ರೈಲ್ವೆ ಸೇತುವೆ ಮೇಲೆ ಕೂತಿದ್ದ ಅವರು ಆಯತಪ್ಪಿ ಕೆಳಗೆ ಬಿದ್ದರು. ಕೊಳಚೆ ನೀರಿನಲ್ಲಿ ಮುಳುಗಿ ಅಲ್ಲಿಯೇ ಸಾವನಪ್ಪಿದರು. ಈ ಬಗ್ಗೆ ವಿವರಪಡೆದ ಗಣೇಶ ಅವರ ತಮ್ಮ ಪ್ರವೀಣ ಹುಲಸ್ವಾರ್ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.