ಮುಂಡಗೋಡಿನ ನಂದೀಶ್ವರದ ಅದಿತಿ ಬಸ್ತವಾಡ ಕಾಣೆಯಾಗಿದ್ದಾರೆ. ಅವರ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಅದಿತಿ ಅವರ ಹುಡುಕಾಟ ನಡೆಸಿದ್ದಾರೆ.
29 ವರ್ಷದ ಅದಿತಿ ಅವರು ಆನಂದ ಬಸ್ತಿವಾಡ ಅವರನ್ನುವಹಿಸಿದ್ದರು. ಮಾರ್ಚ 7ರವರೆಗೂ ಮನೆಯಲ್ಲಿದ್ದ ಅವರು ನಂತರ ಕಾಣೆಯಾದರು. ಆ ದಿನ ಮನೆಯಲ್ಲಿ ಅವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಈ ಸಮಯದಲ್ಲಿಯೇ ಅದಿತಿ ಸಹ ಮನೆಯಿಂದ ಹೊರ ಹೋಗಿದ್ದು, ಮರಳಿ ಬರಲಿಲ್ಲ. ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ.
ಅದಿತಿ ಬಸ್ತಿವಾಡ ಅವರಿಗಾಗಿ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಸ್ನೇಹಿತೆಯರ ಮನೆಗೆ ಫೋನ್ ಮಾಡಿ ವಿಚಾರಿಸಿದರು. ಸಂಬAಧಿಕರ ಬಳಿಯೂ ಪ್ರಶ್ನಿಸಿದರು. ಆದರೆ, ಎಲ್ಲಿಯೂ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಅದಿತಿ ಅವರ ತಂದೆ ಅಜ್ಜಪ್ಪ ಮತ್ತಿಗಟ್ಟಿ ಪೊಲೀಸರ ಮೊರೆಹೊದರು.
ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಅದಿತಿ ಬಸ್ತಿವಾಡ ಅವರ ಹುಡುಕಾಟ ನಡೆಸಿದ್ದಾರೆ.