ಅಂಕೋಲಾ: ಅವರ್ಸಾದ ದೇವನಭಾಗದ ಮಹೇಶ ಅವರ್ಸೇಕರ ಅವರ ಕೊಟ್ಟಿಗೆಯಂಚಿನಲ್ಲಿ ಹಸು ಕರುಹಾಕಿದ್ದು, ವಾಸನೆ ಅರಸಿ ಬಂದ ಹೆಬ್ಬಾವು ಇಡೀ ಕರುವನ್ನು ನುಂಗಿ ಹಾಕಿದೆ. ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಮಹೇಶ ನಾಯ್ಕ ಕರುವನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ.
ಈ ವೇಳೆ ಆಕ್ರೋಶಗೊಂಡ ಜನ ಹೆಬ್ಬಾವನ್ನು ಸಾಯಿಸಬೇಕು ಎಂದು ಪಟ್ಟುಹಿಡಿದರು. ಅರಣ್ಯ ಇಲಾಖೆಯವರು ಇದಕ್ಕೆ ಅವಕಾಶ ಕೊಡಲಿಲ್ಲ. `ಹೆಬ್ಬಾವು ಮನುಷ್ಯರನ್ನು ತಿನ್ನುವುದಿಲ್ಲ. ಕರುವನ್ನು ಆಹಾರವಾಗಿಸಿಕೊಂಡಿದ್ದು ಹಾವಿನ ಸಹಜ ಪ್ರಕ್ರಿಯೆ. ಜೊತೆಗೆ ಅದು ಹಾವಿನ ಹಕ್ಕು’ ಎಂದು ಮಹೇಶ ನಾಯ್ಕ ಜನರಲ್ಲಿ ಅರಿವು ಮೂಡಿಸಿದರು. ಹಾವನ್ನು ಇಲ್ಲಿಂದ ಸ್ಥಳಾಂತರ ಮಾಡುವ ಬಗ್ಗೆ ಆಶ್ವಾಸನೆ ನೀಡಿದರು.
ಆಗ ತಾನೆ ಜನಿಸಿದ ತನ್ನ ಕರುವನ್ನು ಕಳೆದುಕೊಂಡ ತಾಯಿ ಹಸು ರೋಧಿಸುತ್ತಿರುವುದನ್ನು ಜನರಿಂದ ನೋಡಲಾಗಲಿಲ್ಲ. ಹಾವಿನ ಸುತ್ತ ಓಡಾಡುತಿದ್ದ ಹಸುವಿನ ಆಕ್ರಂದನ ನೋಡಿ ಜನ ಕಣ್ಣೀರಾದರು.
Discussion about this post