ಹೊನ್ನಾವರ: ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿ ಕಂಡಿದ್ದು, ಜೆಡಿಎಸ್‌ನ ಸಂಸದ ಹೆಚ್.ಡಿ ಕುಮಾರಸ್ವಾಮಿ ಅವರು ಮೋದಿ ಜೊತೆ ಸೇರಿ ಯೋಗ್ಯ ಖಾತೆ ನಿಭಾಯಿಸುತ್ತಿದ್ದಾರೆ.
ಈ ನಡುವೆ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಸದ್ಯ ತನಗೆ ಮುಂದಿನ ಬಾರಿ ಅವಕಾಶ ಸಿಗಲಿದೆಯೇ ಇಲ್ಲವೇ? ಎನ್ನುವ ಆತಂಕ ಎದುರಾಗಿದೆ. ಮೈತ್ರಿ ಕಾರಣದಿಂದ ಕುಮಟಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರೆ ಎಂಬ ಆತಂಕ ದಿನಕರ ಶೆಟ್ಟಿ ಅವರದ್ದಾಗಿದೆ.
ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಸಹ ತನ್ನದೇ ಆದ ಹಿಡಿತವ್ನ ಇಟ್ಟುಕೊಂಡು ಪಕ್ಷವಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ರ‍್ಧಿಸಿದ್ದ ಸೂರಜ್ ಸೋನಿ ಉತ್ತಮ ಮತಗಳನ್ನ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಇನ್ನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಕುಮಟಾ ಕ್ಷೇತ್ರವನ್ನ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಕೋಲಾರ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿದ್ದ ಮುನಿಸ್ವಾಮಿಗೆ ಟಿಕೆಟ್ ತಪ್ಪಿಸಿ ಜೆಡಿಎಸ್ ಅಭ್ರ‍್ಥಿಗೆ ಟಿಕೆಟ್ ನೀಡಿದ್ದು, ನಂತರ ಎರಡು ಪಕ್ಷ ನಾಯಕರ ಶ್ರಮದಿಂದ ಜೆಡಿಎಸ್ ಅಭ್ರ‍್ಥಿ ಗೆಲುವು ಕಂಡಿದ್ದು ಸಹ ಇಲ್ಲಿ ಉಲ್ಲೇಖನೀಯ.
Discussion about this post