ಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ’ ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8 ಜನರಿಗೆ ಜೂ 22ರಂದು ಅಂಕೋಲಾದ ಶೆಟಗೇರಿ ತಿರುವಿನಲ್ಲಿ ಅಪಘಾತವಾಗಿದೆ. ಪರಿಣಾಮ ಎಲ್ಲರೂ ಗಾಯಗೊಂಡಿದ್ದು, ಕಾರು ಜಖಂ ಆಗಿದೆ. ಗಾಯಗೊಂಡವರ ಪೈಕಿ ಇಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೈದರಾಬಾದ್’ನಲ್ಲಿ ಕಾರು ಖರೀದಿಸಿದ ಕುಟುಂಬದವರು ಹೊಸ ಕಾರು ಬಂದ ಖುಷಿಯಲ್ಲಿದ್ದರು. ಅಲ್ಲಿಂದ ನೇರವಾಗಿ ಮುರುಡೇಶ್ವರಕ್ಕೆ ಬರುತ್ತಿದ್ದರು. ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದರಿoದ ಚಾಲಕ ಕಾರು ನಿಲ್ಲಿಸಲು ಪ್ರಯತ್ನಿಸಿದ್ದು, ಬ್ರೇಕ್ ತಾಗದೇ ಕಾರು ಡಿವೈಡರ್’ಗೆ ತಾಗಿ ಮತ್ತೆ ಮುಂದಿದ್ದ ವಿದ್ಯುತ್ ಕಂಬಕ್ಕೆ ಗುದ್ದಿದೆ. ನಂತರ ಹೆದ್ದಾರಿಯ ಇನ್ನೊಂದು ಬದಿಗೆ ಕಾರು ತಿರುಗಿ ಈ ವೇಳೆ ಕಾರಿನಲ್ಲಿದ್ದ ನಾಲ್ಕು ಮಕ್ಕಳು, ಮಹಿಳೆಯರು ಸೇರಿ 8 ಜನ ಗಾಯಗೊಂಡಿದ್ದಾರೆ. ಅಪಘಾತದ ತಕ್ಷಣ ಏರ್‌ಬ್ಯಾಗ್ ತೆರೆದುಕೊಂಡ ಕಾರಣ ಅದರ ಒಳಗಿದ್ದವರು ಜೀವ ಉಳಿಸಿಕೊಂಡಿದ್ದಾರೆ.
Discussion about this post