ಕುಮಟಾದ ಛತ್ರಕೂರ್ವೆಯ ಜಟಕೇಶ್ವರ ಮತ್ತು ಪರಿವಾರ ದೇವರ ವರ್ಧಂತಿ ಉತ್ಸವ ಅಂಗವಾಗಿ ನಡೆದ ಯಕ್ಷಗಾನ, ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರ ಗಮನಸೆಳೆಯಿತು. ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸಂಘಟಕರು ಸನ್ಮಾನಿಸಿದರು.
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಯಾವುದೇ ಒಂದು ಸಂಘಟನೆ ಶಕ್ತಿಯುತವಾಗಿ ಹೊರಹೊಮ್ಮಬೇಕಾದರೆ ಅಲ್ಲಿನ ಸದಸ್ಯರ ಶ್ರಮ ಮುಖ್ಯವಾಗಿರುತ್ತದೆ. ಅತ್ಯುತ್ತಮ ಸಂಘಟನೆ ಮೂಲಕ ಧಾರ್ಮಿಕ ಕಾರ್ಯ ಹಾಗೂ ಸಾಧಕರಿಗೆ ಸನ್ಮಾನ ನಡೆಸುವ ಮೂಲಕ ಇಲ್ಲಿನ ಯುವ ಬಳಗ ಸಮಾಜಕ್ಕೆ ಮಾದರಿಯಾಗಿದೆ’ ಎಂದರು.
ಈ ವೇಳೆ ನಿವೃತ್ತ ನೌಕರರಾದ ಲಕ್ಷ್ಮಣ ಪಟಗಾರ, ವೆಂಕಟ್ರಮಣ ಪಟಗಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವರಾಮ ಪಟಗಾರ, ಗಿರೀಶ್ ಪಟಗಾರ ಹಾಗೂ ಹರೀಶ ಪಟಗಾರ ಅವರನ್ನು ಗೌರವಿಸಲಾಯಿತು. ಕಗಾಲದ ಶಕ್ತಿ ವೀರ ಮಾರುತಿ ಚಿಣ್ಣರ ಯಕ್ಷಗಾನ ಮಂಡಳಿಯವರು ನಡೆಸಿಕೊಟ್ಟ `ರಾಜ ರುದ್ರಕೋಪ’ ಯಕ್ಷಗಾನ ನೋಡಿದ ಕಲಾಭಿಮಾನಿಗಳು ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು.
ಗ್ರಾ ಪಂ ಅಭಿವೃದ್ಧಿ ಅಧಿಕಾರಿ ವಿ ಎ ಪಟಗಾರ, ನ್ಯಾಯವಾದಿ ವಿನಾಯಕ ಪಟಗಾರ, ಶಿಕ್ಷಕ ಹೊನ್ನಪ್ಪ ಪಟಗಾರ, ವಲಯ ಅರಣ್ಯ ಅಧಿಕಾರಿ ಎಸ್ ಟಿ ಪಟಗಾರ, ಮಿರ್ಜಾನ್ ಗ್ರಾ ಪಂ ಸದಸ್ಯಸ್ಯೆ ಶಾಂತಿ ಪಟಗಾರ, ಊರಿನ ಮುಖಂಡರಾದ ಕುಮಾರ್ ಪಟಗಾರ, ಸಾತು ಪಟಗಾರ ಇನ್ನಿತರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.