6
  • Latest
Festival celebrated using dung and ash The color of Holi here is not important at all!

ಸಗಣಿ-ಬೂದಿ ಬಳಸಿ ಹಬ್ಬ ಆಚರಣೆ: ಇಲ್ಲಿನ ಹೋಳಿಗೆ ಬಣ್ಣ ಮುಖ್ಯವೇ ಅಲ್ಲ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಸಗಣಿ-ಬೂದಿ ಬಳಸಿ ಹಬ್ಬ ಆಚರಣೆ: ಇಲ್ಲಿನ ಹೋಳಿಗೆ ಬಣ್ಣ ಮುಖ್ಯವೇ ಅಲ್ಲ!

AchyutKumar by AchyutKumar
in ರಾಜ್ಯ
Festival celebrated using dung and ash The color of Holi here is not important at all!

ಹೋಳಿ ಎಂದರೆ ಎಲ್ಲಡೆ ಬಣ್ಣಗಳ ಕಲರವ. ಆದರೆ, ಮುಂಡಗೋಡಿನ ದನಗರ ಗೌಳಿ ಸಮುದಾಯದವರಿಗೆ ಹೋಳಿ ಹಬ್ಬ ಎಂದರೆ ಬಣ್ಣ ಎರಚುವುದೇ ಮುಖ್ಯವಲ್ಲ!

ಬಣ್ಣಗಳನ್ನು ಎರಚುವ ಬದಲು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ಇಲ್ಲಿನ ಗೌಳಿ ಜನ ಹೋಳಿ ಹಬ್ಬ ಆಚರಿಸುತ್ತಾರೆ. ಸಗಣಿಯಿಂದ ಮಾಡಿದ ಬೆರಣಿ ಹಾಗೂ ಬೂದಿಯನ್ನು ಎರಚಿ ಹಬ್ಬ ಆಚರಿಸುವ ಪದ್ಧತಿ ಈಗಲೂ ಇಲ್ಲಿದೆ. ಸಾಂಪ್ರದಾಯಿಕ ಹಬ್ಬ ಆಚರಣೆಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿನ ಯುವಕರು ಹಬ್ಬಕ್ಕೆ ಆಗಮಿಸಿ, ಹೊಸ ಬಟ್ಟೆ ತೊಡುತ್ತಾರೆ.

ಪ್ರತಿ ಗೌಳಿವಾಡಾಗಳಲ್ಲಿ ಹೋಳೋಬಾ ದೇವ ಎಂಬ ದೇವರ ಕಲ್ಲು ಇರುತ್ತದೆ. ಅಲ್ಲಿ ಹೋಳಿ ಹುಣ್ಣಿಮೆಯ ರಾತ್ರಿಯಂದು, ಸುತ್ತಲೂ ಬೆರಣಿಗಳನ್ನು ಇಡಲಾಗುತ್ತದೆ. ಗೌಳಿವಾಡಾದಲ್ಲಿ ನಿಗದಿಪಡಿಸಿರುವ ಒಂದು ಮನೆತನದವರು ಹೋಳಿ ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬೆರಣಿಗಳ ರಾಶಿಯನ್ನು ಸುಡಲಾಗುತ್ತದೆ. ಪ್ರತಿ ಮನೆಯಿಂದ ಪ್ರಸಾದದ ರೂಪದಲ್ಲಿ ಹೋಳಿಗೆಯನ್ನು ಅಲ್ಲಿ ತರಲಾಗುತ್ತದೆ. ತಂದಿರುವ ಪ್ರಸಾದವನ್ನು ಮಿಶ್ರಣ ಮಾಡಿ ಅಲ್ಲಿನ ಜನ ಸವಿಯುತ್ತಾರೆ.

ಹುಣ್ಣಿಮೆಯ ಮಾರನೆಯ ದಿನ ಪ್ರತಿ ಮನೆಯಿಂದ ಕೊಡದಲ್ಲಿ ನೀರನ್ನು ತಂದು ಪೂಜಿಸಲ್ಪಟ್ಟ ಹೋಳಿಕಲ್ಲಿಗೆ ಸುರಿಯುತ್ತಾರೆ. ಅಲ್ಲಿರುವ ಬೂದಿಯನ್ನು ಮೈಗೆ ಹಚ್ಚಿಕೊಂಡು ಬಣ್ಣದಾಟ ಆಡುತ್ತಾರೆ. ಚಿಣ್ಣರು ಹುಲಿ, ಕರಡಿ ಸಹಿತ ವಿವಿಧ ಪ್ರಾಣಿಗಳ ವೇಷ. ಮುಖವಾಡ ಹಾಕಿಕೊಂಡು ಕುಣಿಯುತ್ತಾರೆ. ಯುವಕರು ಬೆರಣಿಯ ಬೂದಿಯಲ್ಲಿ ಹೊರಳಾಡುತ್ತಾರೆ. ಪ್ರತಿ ಮನೆ ಮನೆಗೆ ತೆರಳಿ ತೆಂಗಿನಕಾಯಿಸಹಿತ ದವಸಧಾನ್ಯವನ್ನು ಪ್ರಸಾದದ ರೂಪದಲ್ಲಿ ಸಂಗ್ರಹಿಸುತ್ತಾರೆ. ಹೋಳಿ ಹಬ್ಬಕ್ಕೆಂದೇ ಇರುವ ಹಾಡುಗಳನ್ನು ಹಾಡುತ್ತ ನೃತ್ಯ ಮಾಡುತ್ತಾರೆ

ಇನ್ನೂ ಊರೂರು ಸಂಚಾರ ಹೋಳಿ ಹಬ್ಬದ ಎರಡನೇ ದಿನದಿಂದ ಯುವಪಡೆಯು ಒಂದೊoದು ತಂಡವನ್ನು ಕಟ್ಟಿಕೊಂಡು ಸಾಂಪ್ರದಾಯಿಕ ಬಣ್ಣದ ಪೋಷಾಕು ಧರಿಸಿ ಊರೂರು ಸಂಚಾರ ನಡೆಸುತ್ತಾರೆ. ಅಲ್ಲಿ ಸಂಗ್ರಹವಾಗುವ ದವಸಧಾನ್ಯ ದುಡ್ಡು ಪಡೆದು ಐದನೇ ದಿನ ಊರಿಗೆ ಮರಳುತ್ತಾರೆ.

ShareSendTweetShare
Previous Post

ಸರಾಯಿ ಮಾರಾಟ-ಗಾಂಜಾ ಸೇವನೆ: ವ್ಯಸನಿಗಳ ವಿರುದ್ಧ ಕಠಿಣ ಕ್ರಮ

Next Post

ಧರ್ಮ ರಕ್ಷಣೆ ಜೊತೆ ಕಲಾ ಆರಾಧನೆ: ಯುವ ಬಳಗದ ಕಾರ್ಯಕ್ಕೆ ಹಲವರ ಮೆಚ್ಚುಗೆ

Next Post
Protecting religion while worshipping art Many praise the work of the youth group

ಧರ್ಮ ರಕ್ಷಣೆ ಜೊತೆ ಕಲಾ ಆರಾಧನೆ: ಯುವ ಬಳಗದ ಕಾರ್ಯಕ್ಕೆ ಹಲವರ ಮೆಚ್ಚುಗೆ

Karwar Defense Forum remembers Henjah Naik

ಕಾರವಾರ | ರಕ್ಷಣಾ ವೇದಿಕೆಯಿಂದ ಹೆಂಜಾ ನಾಯ್ಕರ ಸ್ಮರಣೆ

The disciplined soldier turns 78!

ಶಿಸ್ತಿನ ಸಿಫಾಯಿಗೆ 78ರ ಹರೆಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.