ಶಿರಸಿ ಅರಣ್ಯ ವಿದ್ಯಾಲಯದ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸುರೇಶ ಮೊಗೇರ್ ನಂತರ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಿಲ್ಲ. ಇದೀಗ ಅವರ ಕಾಡಿನ ಗುಡ್ಡದ ಮೇಲೆ ಅವರ ಶವ ಸಿಕ್ಕಿದೆ.
ಶಿರಸಿ ಪಡಂಬೈಲ್ ಬಳಿಯ ಬಚಗಾಂವಿನಲ್ಲಿ ಸುರೇಶ ಮೊಗೇರ್ (55) ವಾಸವಾಗಿದ್ದರು. ಮಾರ್ಚ 15ರ ಮಧ್ಯಾಹ್ನ ಕೂಲಿ ಕೆಲಸಕ್ಕಾಗಿ ಗೋಲಗೇರಿ ಓಣಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದರು. ಅದರ ಪ್ರಕಾರ ಕೆಲಸ ಮುಗಿಸಿ ಸಂಜೆ ಶಿರಸಿ ಪಾರೇಸ್ಟ್ ಕಾಲೇಜಿನ ಪೆಂಡಬೈಲ್ ರಸ್ತೆ ಮೂಲಕ ನಡೆದು ಬರುತ್ತಿದ್ದರು. ಆದರೆ, ಎಷ್ಟು ಹೊತ್ತು ಕಳೆದರೂ ಅವರು ಮನೆಗೆ ಮರಳಲಿಲ್ಲ.
ಸುರೇಶ ಮೊಗೇರ್ ಅವರು ಹೋಳಿ ಹಬ್ಬದ ದಿನ ಪೇಟೆಯಲ್ಲಿ ಮಗನನ್ನು ಮಾತನಾಡಿಸಿದ್ದರು. `ಎಲೆ-ಅಡಿಕೆ ತರಲು ಹೋಗುವೆ’ ಎಂದಿದ್ದರು. ಕೆಲಸಕ್ಕೆ ಹೋದ ಅವರು ಎರಡು ದಿನ ಹುಡುಕಿದರೂ ಸುಳಿವು ಸಿಗದ ಕಾರಣ ಸುರೇಶ್ ಮೊಗೇರ್ ಕಾಣೆಯಾದ ಬಗ್ಗೆ ಅವರ ಪುತ್ರ ನಾಗರಾಜ ಮೊಗೇರ್ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು.
ಮಂಗಳವಾರ ಅವರ ಶವ ಗುಡ್ಡದ ಮೇಲೆ ಸಿಕ್ಕಿದೆ. ನಾಗರಾಜ ಮೊಗೇರ್ ಅವರು ಆಗಮಿಸಿ ಸುರೇಶ ಮೊಗೇರ್ ಅವರ ಗುರುತು ಹಿಡಿದಿದ್ದಾರೆ. ಆದರೆ, ಈವರೆಗೂ ಅವರ ಸಾವಿಗೆ ಕಾರಣ ಗೊತ್ತಾಗಲಿಲ್ಲ.