ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರಕ್ಕೆ ರಾಷ್ಟ್ರೀಯ ಚೆಸ್ ಆಟಗಾರ ಗೊಲ್ಲಾಳಪ್ಪ ಬಿ ಹಡಪದ ಆಗಮಿಸಿದ್ದು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರನ್ನು ಸನ್ಮಾನಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಗೊಲ್ಲಾಳಪ್ಪ ಹಡಪದ ಅವರಿಗೆ ಚೆಸ್ ಬಗ್ಗೆ ಕಿಂಚಿತ್ತು ಮಾಹಿತಿಯಿರಲಿಲ್ಲ. ಆದರೆ, ಕಳೆದ ನವೆಂಬರ್ ತಿಂಗಳಿನಲ್ಲಿ ಕೊಲ್ಕತ್ತಾದಲ್ಲಿ ನಡೆದ ಪ ಪೂ ಶಿಕ್ಷಣ ಇಲಾಖೆಯ ಚೆಸ್ ಪಂದ್ಯಾವಳಿಯಲ್ಲಿ ಅವರು ಭಾಗವಹಿಸಿ ಸಾಧನೆ ಮಾಡಿದ್ದಾರೆ. ಇದಕ್ಕೆ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಕಾರಣವಾಗಿದ್ದು, ಇದೇ ಹಿನ್ನಲೆ ಅವರು ಶಾಲೆಗೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.
ಯಾದಗಿರಿ ಮೂಲದ ಗೊಲ್ಲಾಳಪ್ಪ ಹಡಪದ ಅವರ ಸಹೋದರ ಈಶ್ವರ್ ಅವರು ಕಾರವಾರದ ಇಂಜಿನಿಯರಿoಗ್ ಕಾಲೇಜಿನಲ್ಲಿದ್ದರು. ಅವರ ಮೂಲಕ 2021ರಲ್ಲಿ ಗೊಲ್ಲಾಳಪ್ಪ ಹಡಪದ ಅವರು ಅಸ್ನೋಟಿ ಶಿವಾಜಿ ವಿದ್ಯಾಮಂದಿರಕ್ಕೆ ಬಂದರು. ಇಲ್ಲಿನ ಹಾಸ್ಟೇಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡ ಗೊಲ್ಲಾಳಪ್ಪ ಬಿ ಹಡಪದ ಅವರು ಚೆಸ್ ಬಗ್ಗೆ ಗಮನಹರಿಸಿದರು. ಅವರ ಆಸಕ್ತಿ ಗುರುತಿಸಿ ಶಿಕ್ಷಕ ಗಣೇಶ ಭೀಷ್ಠಣ್ಣನವರ್ ಹೊಸ ಚೆಸ್ ಬೋರ್ಡ ಕೊಡಿಸಿ ಪ್ರೋತ್ಸಾಹಿಸಿದರು.
ಬಡತನದ ನಡುವೆಯೂ 600ಕಿಮೀ ದೂರದ ಊರಿನಿಂದ ವಿದ್ಯೆ ಕಲಿಯಲು ಕಾರವಾರಕ್ಕೆ ಬಂದಿದ್ದ ಗೊಲ್ಲಾಳಪ್ಪ ಹಡಪದ ಅವರು ಚೆಸ್ ಆಟದಲ್ಲಿ ಪರಿಣಿತಿಪಡೆದರು. ಇಲ್ಲಿನ ಶಿಕ್ಷಣ ಮುಗಿಸಿ ಯಾದಗಿರಿಗೆ ಮರಳಿದ ಅವರು ಪಿಯು ಪ್ರವೇಶಪಡೆದರು. ಅಲ್ಲಿನ ಚೆಸ್ ಆಟದಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟವನ್ನು ಪ್ರತಿನಿಧಿಸಿ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿಯೂ ಸಾಧನೆ ಮಾಡಿದರು. ಮಾಜಿ ವಿದ್ಯಾರ್ಥಿಯ ಸಾಧನೆ ಮೆಚ್ಚಿ ಶಿವಾಜಿ ವಿದ್ಯಾ ಮಂದಿರದವರು ಗೌರವಿಸಿದರು.
ಉತ್ತರ ಕನ್ನಡ ಜಿಲ್ಲಾ ಸಮಾಜ ವಿಜ್ಞಾನ ವಿಷಯ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ, ಶಿಕ್ಷಕ ವಿಜಯಕುಮಾರ್ ನಾಯ್ಕ, ಗಣೇಶ ಬೀಷ್ಠಣ್ಣನವರ್ ಮೊದಲಾದವರು ಗೊಲ್ಲಾಳಪ್ಪ ಹಡಪದ ಅವರ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಮ್ಯಾ ದೊಡ್ಮನಿ ಸಂಗಡಿಗರು ಪ್ರಾರ್ಥಿಸಿದರು. ಶ್ರವಣ ನಾಯ್ಕ ಸ್ವಾಗತಿಸಿದರು. ರೊಷನ್ ಪೆಡ್ನೇಕರ ನಿರ್ವಹಿಸಿ, ವೀರೇಂದ್ರ ಸಾವಂತ ವಂದಿಸಿದರು.