6
  • Latest
First meeting Madhav forgets his grudge and breaks his silence!

ಮೊದಲ ಸಭೆ: ಮುನಿಸು ಮರೆತು ಮೌನ ಮುರಿದ ಮಾಧವ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮೊದಲ ಸಭೆ: ಮುನಿಸು ಮರೆತು ಮೌನ ಮುರಿದ ಮಾಧವ!

AchyutKumar by AchyutKumar
in ರಾಜ್ಯ
First meeting Madhav forgets his grudge and breaks his silence!

ಗುತ್ತಿಗೆದಾರರ ಸಮಸ್ಯೆಗಳ ಕುರಿತು ಒಂಟಿ ಹೋರಾಟ ನಡೆಸುತ್ತಿದ್ದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ತಮ್ಮ ಬೆಂಬಲಕ್ಕೆ ಯಾರೂ ಬಾರದ ಕಾರಣ ಮುನಿಸಿಕೊಂಡಿದ್ದು, ಗುತ್ತಿಗೆದಾರರ ಸಂಘದ ಮೊದಲ ಸಭೆಯಲ್ಲಿ ಆ ಮುನಿಸು ಮರೆತು ಮಾತನಾಡಿದರು. `ಗುತ್ತಿಗೆದಾರರೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಬದುಕು ಸಾಧ್ಯ’ ಎಂದು ಅವರು ಸಭೆಯಲ್ಲಿದ್ದವರಿಗೆ ಮನವರಿಕೆ ಮಾಡಿದರು.

ADVERTISEMENT

ಕರ್ನಾಟಕ ರಾಜ್ಯ ಸಿವಿಲ್ ಗುತ್ತಿಗೆದಾರರ ಸಂಘದ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಿತು. ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ `ಗುತ್ತಿಗೆದಾರರೆಲ್ಲರೂ ಪಕ್ಷ- ಭೇದ ಮರೆತು ಒಂದಾಗಬೇಕು’ ಎಂದು ಕರೆ ನೀಡಿದರು. `ಹೋರಾಟದ ಮುಂಚೂಣಿಯಲ್ಲಿದ್ದವರಿಗೆ ಎಷ್ಟೊಂದು ಸಮಸ್ಯೆಗಳು ಬರುತ್ತವೆ ಎನ್ನುವುದಕ್ಕೆ ನಾನೇ ಸಾಕ್ಷಿ’ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.

`ಗುತ್ತಿಗೆದಾರರಿಗೆ ಸರ್ಕಾರದ ಬಾಕಿ ಪಾವತಿಯಾಗುತ್ತಿಲ್ಲ. ಗುತ್ತಿಗೆದಾರರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಶೇ 40ರ ಕಮಿಶನ್ ವಿರುದ್ಧ ಹೋರಾಡಿದ ಕಾರಣ ಕೋರ್ಟು-ಕಚೇರಿ ಅಲೆದಾಡುವ ಹಾಗಾಗಿದ್ದು, ನನ್ನ ವಿರುದ್ಧ 10 ಕೋಟಿಯ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಕಾಮಗಾರಿ ಬಿಲ್ ಪಾವತಿಯಾಗದ ಬಗ್ಗೆ ಧ್ವನಿ ಎತ್ತಿದರೂ ಅದನ್ನು ದಮನಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಬೇಸರದಿಂದ ಮಾತನಾಡಿದರು. ಮಾಧವ ನಾಯಕರ ಧ್ವನಿ ಆಲಿಸಿದ ಇನ್ನಿತರ ಗುತ್ತಿಗೆದಾರರು `ಮಾನನಷ್ಟ ಮೊಕದ್ದಮೆ ಹಿಂಪಡೆಯಲು ಒತ್ತಾಯಿಸೋಣ’ ಎಂಬ ಭರವಸೆ ನೀಡಿದರು. ಆದರೆ, ಅದನ್ನು ತಿರಸ್ಕರಿಸಿದ ಮಾಧವ ನಾಯಕರು `ನಾನು ಆಡಿದ ಪ್ರತಿ ಮಾತಿಗೂ ದಾಖಲೆಯಿದೆ. ಕಾನೂನು ಹೋರಾಟದ ಮೂಲಕವೇ ಅದನ್ನು ಬಗೆಹರಿಸುವೆ’ ಎಂದು ಸ್ಪಷ್ಠಪಡಿಸಿದರು.

Advertisement. Scroll to continue reading.

`ಎಲ್ಲಡೆ ಭ್ರಷ್ಟಾಚಾರ ಮಿತಿ ಮೀರಿದೆ. ಕಾಮಗಾರಿ ಮಂಜೂರಿ ಮಾಡಿಸಿಕೊಂಡು ಬರಲು ಅಧಿಕಾರಿ-ಶಾಸಕರಿಗೆ ಹಣ ಕೊಡಬೇಕಾಗಿದೆ. ಕೆಆರ್‌ಐಡಿಎಲ್, ನಿರ್ಮಿತಿಯಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟಬೇಕು. ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸಭೆ ಆಯೋಜಿಸಬೇಕು’ ಎಂದು ಅವರು ಆಗ್ರಹಿಸಿದರು. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳು ಸಭೆಗೆ ತಿಳಿಸಿದರು.

Advertisement. Scroll to continue reading.

ದೆಹಲಿಗೆ ತೆರಳಲಿದೆ ನಿಯೋಗ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ, ಉಪಾಧ್ಯಕ್ಷ ಎನ್ ಮಂಜುನಾಥ, ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ಅವರು ಜಿಎಸ್‌ಟಿ ವಿಚಾರಕ್ಕೆ ಸಂಬAಧಿಸಿ ಮಾತನಾಡಲು ದೆಹಲಿಗೆ ಹೋಗುತ್ತಿದ್ದಾರೆ. ಜಿಎಸ್‌ಟಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಜಿಎಸ್‌ಟಿ ಪಾವತಿಗೆ ಮಾರ್ಚ್ 31ರವರೆಗಿರುವ ನಿರ್ಧರಿತ ದಿನವನ್ನು ಡಿಸೆಂಬರ್‌ವರೆಗೆ ವಿಸ್ತರಿಸಿ ಕಾಲಾವಕಾಶ ನೀಡಬೇಕು ಎಂದು ಕೋರಲಿದ್ದಾರೆ.

Previous Post

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನ್ಯಾಯವಾದಿಯ ಕಿವಿಮಾತು

Next Post

ಉಂಚಳ್ಳಿ ಸೊಸೈಟಿ ಅಕ್ರಮ: ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಸಾಲಗಾರರ ಮೇಲೆಯೂ ತನಿಖೆಯ ತೂಗುಗತ್ತಿ!

Next Post
Unchalli Society irregularities Investigation looms over the association's president and vice-president as well as its creditors!

ಉಂಚಳ್ಳಿ ಸೊಸೈಟಿ ಅಕ್ರಮ: ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಸಾಲಗಾರರ ಮೇಲೆಯೂ ತನಿಖೆಯ ತೂಗುಗತ್ತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ