ಶಿರಸಿ-ಹೆಗಡೆಕಟ್ಟಾ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬಳಿಯ ಕೃಷ್ಣ ಗೌಡ ಸಾವನಪ್ಪಿದ್ದಾರೆ.
ಶಿರಸಿಯ ಶಿವಳ್ಳಿ-ಪಂಚಲಿoಗ ಬಳಿಯ ಹೆಗ್ಗಾರ್‌ದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕಿಕೊಂಡಿದ್ದ ಕೃಷ್ಣ ಗೌಡ (21) ಅವರು ಮಾರ್ಚ 24ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ಸಂಪಿಗೆಮನೆ ಕ್ರಾಸಿನಲ್ಲಿ ಅವರಿಗೆ ಅಪರಿಚಿತ ವಾಹನ ಗುದ್ದಿದೆ.
ಅಪಘಾತದ ಬಗ್ಗೆ ಅರಿವಿದ್ದರೂ ಅಪರಿಚಿತ ವಾಹನ ಚಾಲಕ ತನ್ನ ವಾಹನ ನಿಲ್ಲಿಸಿಲ್ಲ. ರಕ್ತದ ಮೊಡವಿನಲ್ಲಿ ಬಿದ್ದಿದ್ದ ಕೃಷ್ಣ ಗೌಡರಿಗೆ ನೆರವಾಗಿಲ್ಲ. ಅಪಘಾತ ನಡೆದ ಬಗ್ಗೆ ಪೊಲೀಸರಿಗೆ ಸಹ ಹೇಳಿಲ್ಲ. ಹೀಗಾಗಿ ಕೃಷ್ಣ ಗೌಡ ಅಲ್ಲಿಯೇ ಸಾವನಪ್ಪಿದ್ದಾರೆ.
ಅಪರಿಚಿತ ವಾಹನ ಹಿಂದಿನಿAದ ಬಂದು ಡಿಕ್ಕಿ ಹೊಡೆದಿರುವುದು ಗೊತ್ತಾಗಿದೆ. ಪರಿಣಾಮ ತಲೆಯ ಹಿಂದೆ ಭಾರೀ ಪ್ರಮಾಣದ ಗಾಯವಾಗಿ ಕೃಷ್ಣ ಗೌಡ ಸಾವನಪ್ಪಿದ್ದಾರೆ. ಕೃಷ್ಣ ಗೌಡರ ಬೈಕ್ ಸಹ ಜಖಂ ಆಗಿದೆ. ಡಿಕ್ಕಿ ಹೊಡೆದ ಆ ವಾಹನ ಯಾವುದು? ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಣ್ಣನ ಸಾವಿನ ಬಗ್ಗೆ ಭರತ ಗೌಡ ಪೊಲೀಸ್ ದೂರು ನೀಡಿದ್ದಾರೆ.