ಅಂಕೋಲಾದ ಕವಿತಾ ನಾಯ್ಕ ಇಲಿ ಪಾಷಣ ಸೇವಿಸಿ ಸಾವನಪ್ಪಿದ್ದಾರೆ. ಐದು ಆಸ್ಪತ್ರೆಯಲ್ಲಿ ಆರೈಕೆ ಮಾಡಿದರೂ ಪ್ರಯೋಜನವಾಗದೇ ಅವರು ಮಂಗಳವಾರ ಕೊನೆ ಉಸಿರೆಳೆದಿದ್ದಾರೆ.
ಅಂಕೋಲಾದ ಹಟ್ಟಿಕೇರಿಯಲ್ಲಿ ಕವಿತಾ ನಾಯ್ಕ (19) ವಾಸವಾಗಿದ್ದರು. ಕಾಲೇಜಿಗೆ ಹೋಗಿ ಬರುತ್ತಿದ್ದ ಅವರು ಈಚೆಗೆ ಮಂಕಾಗಿದ್ದರು. ಮಾರ್ಚ 18ರ ಮಧ್ಯಾಹ್ನ ತೀರಾ ಬೇಸರದಲ್ಲಿದ್ದ ಕವಿತಾ ನಾಯ್ಕ ಮನೆಯಲ್ಲಿದ್ದ ಇಲಿ ಪಾಷಣವನ್ನು ಸೇವಿಸಿದ್ದರು.
ಅದಾದ ನಂತರ ಹೊಟ್ಟೆ ನೋವಿನಿಂದ ಬಳಲಿದ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಕವಿತಾ ನಾಯ್ಕ ಅವರು ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಾಂತಿ ಮಾಡಿದರು. ತೀವೃ ಅಸ್ವಸ್ಥಗೊಂಡ ಅವರನ್ನು ಮಾರ್ಚ 23ರಂದು ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಲ್ಲಿಂದ ಎಜೆ ಆಸ್ಪತ್ರೆ, ವೆನ್ ಲಾಕ್ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಕೊಡಿಸಲಾಯಿತು. ಕೊನೆಗೆ ಶ್ರೀನಿವಾಸ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಮಾರ್ಚ 25ರಂದು ಹಟ್ಟಿಕೇರಿಯ ದೇವೇಂದ್ರ ನಾಯ್ಕರ ಪುತ್ರಿ ಕವಿತಾ ನಾಯ್ಕ ಕೊನೆ ಉಸಿರೆಳೆದರು.





