ಮುಂಡಗೋಡದಲ್ಲಿ ಚಲಿಸುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದಿದೆ. ಬಸ್ಸಿನ ಒಳಗಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಮಳಗಿ ಸೊಸೈಟಿ ಬಳಿ ಬುಧವಾರ ಸಂಜೆ 7.30ರ ವೇಳೆಗೆ ಬಸ್ಸು ಚಲಿಸುತ್ತಿತ್ತು. ರಸ್ತೆ ಅಂಚಿನ ಮರ ದಿಢೀರ್ ಆಗಿ ಕುಸಿದು ಬಿದ್ದಿತು. ಇದರಿಂದ ಬಸ್ಸಿನ ಒಳಗಿದ್ದ ಪ್ರಯಾಣಿಕರು ಕಕ್ಕಾಬಿಕ್ಕಿಯಾದರು. ಚಾಲಕ-ನಿರ್ವಾಹಕರು ಸೇರಿ ಪ್ರಯಾಣಿಕರನ್ನು ಸಮಾಧಾನ ಮಾಡಿದರು.
ಈ ಬಸ್ಸು ಭಟ್ಕಳ-ಹುಬ್ಬಳ್ಳಿ-ವಿಜಯಪುರ-ಕಲ್ಬುರ್ಗಿ ಮಾರ್ಗವಾಗಿ ಸಂಚರಿಸಬೇಕಿತ್ತು. ಮರ ಬಿದ್ದ ಪರಿಣಾಮ ಬಸ್ಸು ಜಖಂ ಆಗಿದೆ. ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಯಾಣಿಕರ ಸುರಕ್ಷತೆ ಕಡೆ ಗಮನಹರಿಸಿದ್ದಾರೆ.





