6
  • Latest
Education officer enjoys a hot meal with children!

ಮಕ್ಕಳ ಜೊತೆ ಬಿಸಿಯೂಟ ಸವಿದ ಶಿಕ್ಷಣಾಧಿಕಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಕ್ಕಳ ಜೊತೆ ಬಿಸಿಯೂಟ ಸವಿದ ಶಿಕ್ಷಣಾಧಿಕಾರಿ!

AchyutKumar by AchyutKumar
in ಸ್ಥಳೀಯ
Education officer enjoys a hot meal with children!

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಲಿರುವ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರು ಗುರುವಾರ ಮಕ್ಕಳ ಜೊತೆ ಕಾಲ ಕಳೆದರು. ಶಾಲೆಯ ಕೆಲ ಮಕ್ಕಳನ್ನು ಮಾತನಾಡಿಸಿ ಶೈಕ್ಷಣಿಕ ಗುಣಮಟ್ಟ ಅಳೆದರು. ಅದಾದ ನಂತರ ಸವಣಗೇರಿ ಶಾಲೆಯಲ್ಲಿಯೇ ಅವರು ಮಕ್ಕಳ ಜೊತೆ ಊಟ ಮಾಡಿದರು.

ಶಿಕ್ಷಣಾಧಿಕಾರಿ ಆಗಮನದಿಂದ ಸಂತಸಗೊ0ಡ ಸವಣಗೇರಿ ಶಾಲಾ ಆಡಳಿತ ಮಂಡಳಿಯವರು ವಿಶೇಷ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು. ಪುರಿ-ಬಾಜಿ-ಪಾಯಸ ಸೇರಿ ಬಗೆ ಬಗೆಯ ಪದಾರ್ಥಗಳನ್ನು ಬಡಿಸಿದರು. ಮಧ್ಯಾಹ್ನ ಸವಣಗೇರಿ ಶಾಲೆಯಲ್ಲಿ `ಪಾನಿಪುರಿ ಹಬ್ಬ’ ಆಯೋಜಿಸಲಾಗಿದ್ದು, ಈ ಹಬ್ಬದಲ್ಲಿಯೂ ಮಕ್ಕಳು ಖುಷಿಯಿಂದ ಭಾಗವಹಿಸಿದರು.

ಯಲ್ಲಾಪುರದ ಸವಣಗೇರಿ ಶಾಲೆಯಲ್ಲಿ ಕಲಿತ 7ನೇ ತರಗತಿ ವಿದ್ಯಾರ್ಥಿಗಳನ್ನು ಬೀಳ್ಕೊಡುವುದಕ್ಕಾಗಿ ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ ಕಾರ್ಯಕ್ರಮ ಆಯೋಜಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರನ್ನು ಶಿಕ್ಷಕರೆಲ್ಲರೂ ಸೇರಿ ಸನ್ಮಾನಿಸಿದರು. 7ನೇ ತರಗತಿಯ ಐದು ವಿದ್ಯಾರ್ಥಿಗಳು ಸೇರಿ ಈ ವೇಳೆ ಶಾಲೆಗೆ ಕಪಾಟನ್ನು ಉಡುಗರೆಯಾಗಿ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ `ಸರ್ಕಾರಿ ಶಾಲೆ ಉಳಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದ್ದರೂ ಸವಣಗೇರಿಯಂಥ ಶಾಲೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಯಲ್ಲಾಪುರದ 96 ಶಾಲೆಗಳಲ್ಲಿ ಸದ್ಯ ಇಂಗ್ಲೀಷ್ ಕಲಿಕೆ ಶುರುವಾಗಿದ್ದು, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.

`ಶಿಕ್ಷಕನ ಮಗನಾಗಿರುವ ನಾನು ಸರ್ಕಾರಿ ಶಾಲೆಯಲ್ಲಿ ಕಲಿತು ಶಿಕ್ಷಣಾಧಿಕಾರಿಯಾಗಿದ್ದೇನೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಶಾಲೆ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಅವರು ಹೇಳಿದರು.

ShareSendTweetShare
Previous Post

ಗೃಹ ಸಚಿವ ಪರಂ.. ಗೋವಾ ವ್ಯಸನದ ವಿರುದ್ಧ ಗರಂ!

Next Post

ಶಿರಸಿ ಟ್ರಾಫಿಕ್ ಠಾಣೆ ಸ್ಥಾಪನೆ: ಅದೇ ಪೊಲೀಸರು.. ಅದೇ ನಿಯಮ.. ಸಮವಸ್ತ್ರದ ಬಣ್ಣ ಮಾತ್ರ ಬೇರೆ!

Next Post
Establishment of Sirsi Traffic Station Same police.. same rules.. only the color of the uniform is different!

ಶಿರಸಿ ಟ್ರಾಫಿಕ್ ಠಾಣೆ ಸ್ಥಾಪನೆ: ಅದೇ ಪೊಲೀಸರು.. ಅದೇ ನಿಯಮ.. ಸಮವಸ್ತ್ರದ ಬಣ್ಣ ಮಾತ್ರ ಬೇರೆ!

ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಹೊಟ್ಟೆ ನೋವು: ಮಾತ್ರೆ ತಿಂದು ಪ್ರಾಣಬಿಟ್ಟ ನಿವೃತ್ತ ಶಿಕ್ಷಕ!

ಮರದಿಂದ ಬಿದ್ದ ಸೊಪ್ಪು ಕಡಿಯುವ ಕಾರ್ಮಿಕ: ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.