ಹೊನ್ನಾವರದ ನಿವೃತ್ತ ಶಿಕ್ಷಕ ದತ್ತಾತ್ರೇಯ ಹೆಗಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಟ್ಟೆನೋವಿನ ಕಾರಣ ಮಾತ್ರೆ ಸೇವಿಸಿ ಮಲಗಿದ ಅವರು ಮದ್ಯರಾತ್ರಿ ಎದ್ದು ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ಹೊನ್ನಾವರದ ಕಡತೋಕಾ ಮೊಗಳಕೇರಿಯ ದತ್ತಾತ್ರೇಯ ಪರಮೇಶ್ವರ ಹೆಗಡೆ ಅವರು 86 ವರ್ಷಗಳ ಕಾಲ ಸಾತ್ವಿಕ ಬದುಕು ನಡೆಸಿದ್ದರು. ಶಿಕ್ಷಕ ವೃತ್ತಿ ಮಾಡಿಕೊಂಡಿದ್ದ ಅವರು ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ್ದರು. ನಿವೃತ್ತಿ ನಂತರ ಮಕ್ಕಳಾದ ಗಣಪತಿ ಹೆಗಡೆ ಹಾಗೂ ಸತೀಶ ಹೆಗಡೆ ಅವರ ಜೊತೆ ವಾಸವಾಗಿದ್ದರು. ಪತ್ನಿ ಸೀತಾ ಹೆಗಡೆ, ಸೊಸೆ ಭವ್ಯ, ಮೂಕಾಂಬೆ ಹಾಗೂ ಮೊಮ್ಮಕ್ಕಳಾದ ಪ್ರಣವ, ಅನಿಲ, ಸುನಿಲರ ಜೊತೆ ಅನ್ಯೋನ್ಯವಾಗಿ ಜೀವಿಸಿದ್ದರು.
ಶಿಕ್ಷಣ ವೃತ್ತಿಯ ವೇಳೆ ಮಕ್ಕಳ ಆತ್ಮಸ್ಥೆöÊರ್ಯ ಹೆಚ್ಚಿಸಲು ದತ್ತಾತ್ರೇಯ ಹೆಗಡೆ ಅವರು ಸ್ಪೂರ್ತಿದಾಯಕ ಕಥೆಗಳನ್ನು ಹೇಳುತ್ತಿದ್ದರು. ನಿವೃತ್ತಿ ನಂತರವೂ ಅವರು ಮಕ್ಕಳ ಜೊತೆ ಬೆರೆಯುತ್ತಿದ್ದರು. ಆದರೆ, ಸ್ಪೂರ್ತಿಯ ಚಲುಮೆಯಂತಿದ್ದ ಪರಮೇಶ್ವರ ಹೆಗಡೆ ಅವರು ಹೊಟ್ಟೆನೋವು ಸಹಿಸದೇ ಆತ್ಮಹತ್ಯೆಗೆ ಶರಣಾದರು.
ಮಾರ್ಚ 25ರ ರಾತ್ರಿ ಊಟ ಮಾಡಿದ ದತ್ತಾತ್ರೇಯ ಹೆಗಡೆ ಅವರು ಮಾತ್ರೆ ಸೇವಿಸಿ ಮನೆಯ ಹಾಲ್’ನಲ್ಲಿ ಮಲಗಿದ್ದರು. ರಾತ್ರಿ 11.30ರ ವೇಳೆ ಮನೆಯವರೆಲ್ಲರೂ ನಿದ್ರಿಸಿದ್ದರು. ಮರುದಿನ ನಸುಕಿನ 4 ಗಂಟೆಗೆ ದತ್ತಾತ್ರೇಯ ಹೆಗಡೆ ಅವರ ಮಗ ಸತೀಶ ಹೆಗಡೆ ಮೂತ್ರ ವಿಸರ್ಜನೆಗಾಗಿ ಎದ್ದಾಗ ಹಾಲ್’ನಲ್ಲಿ ದತ್ತಾತ್ರೇಯ ಹೆಗಡೆ ಅವರು ಕಾಣಲಿಲ್ಲ. ಎಲ್ಲಾ ಕಡೆ ಹುಡುಕಾಡಿ ಮನೆಯ ಮೊದಲ ಮಹಡಿಗೆ ಹೋಗಿ ನೋಡಿದಾಗ ಅಲ್ಲಿ ಅವರು ನೇತಾಡುತ್ತಿದ್ದರು. ಕೂಡಲೇ ಸತೀಶ ಹೆಗಡೆ ಮನೆಯಲ್ಲಿದ್ದ ಎಲ್ಲರನ್ನು ಎಬ್ಬಿಸಿ, ಪರಮೇಶ್ವರ ಹೆಗಡೆ ಅವರನ್ನು ನೆಲಕ್ಕೆ ಮಲಗಿಸಿದರು.
ಅವರ ದೇಹ ತಣ್ಣಗಾಗಿದ್ದರೂ ಆಸ್ಪತ್ರೆಗೆ ಕರೆ ತಂದು ಬದುಕಿಸುವ ಪ್ರಯತ್ನ ನಡೆಸಿದರು. ಆದರೆ, ಪರೀಕ್ಷಿಸಿದ ವೈದ್ಯರು ದತ್ತಾತ್ರೆಯ ಹೆಗಡೆ ಸಾವನಪ್ಪಿರುವ ಸುದ್ದಿಯನ್ನು ದೃಢಪಡಿಸಿದರು.




