6
  • Latest
Establishment of Sirsi Traffic Station Same police.. same rules.. only the color of the uniform is different!

ಶಿರಸಿ ಟ್ರಾಫಿಕ್ ಠಾಣೆ ಸ್ಥಾಪನೆ: ಅದೇ ಪೊಲೀಸರು.. ಅದೇ ನಿಯಮ.. ಸಮವಸ್ತ್ರದ ಬಣ್ಣ ಮಾತ್ರ ಬೇರೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರಸಿ ಟ್ರಾಫಿಕ್ ಠಾಣೆ ಸ್ಥಾಪನೆ: ಅದೇ ಪೊಲೀಸರು.. ಅದೇ ನಿಯಮ.. ಸಮವಸ್ತ್ರದ ಬಣ್ಣ ಮಾತ್ರ ಬೇರೆ!

AchyutKumar by AchyutKumar
in ರಾಜ್ಯ
Establishment of Sirsi Traffic Station Same police.. same rules.. only the color of the uniform is different!

ಶಿರಸಿ ಟ್ರಾಫಿಕ್ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ

ಶಿರಸಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದನ್ನು ಮನಗಂಡು ಸರ್ಕಾರ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸ್ಥಾಪಿಸಿದೆ. ಟ್ರಾಫಿಕ್ ನಿಯಂತ್ರಣದ ಜೊತೆ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಇಲ್ಲಿಯೂ ಕಠಿಣ ಕ್ರಮ ಜಾರಿಯಾಗಲಿದೆ.

ಸಂಚಾರಿ ವ್ಯವಸ್ಥೆಯಲ್ಲಿ ಶಿಸ್ತು ಮೂಡಿಸುವುದಕ್ಕಾಗಿ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತೆರೆಯಲಾಗಿದೆ. ಬಿಳಿ ಬಣ್ಣದ ಬಟ್ಟೆ ಧರಿಸಿದ ಪೊಲೀಸರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಮದ್ಯ ಸೇವಿಸಿ ವಾಹನ ಚಾಲನೆ ಸೇರಿ ಹಲವು ರೀತಿಯ ಪ್ರಕರಣಗಳನ್ನು ಪತ್ತೆ ಮಾಡುವುದು ಈ ಪೊಲೀಸರ ಮುಖ್ಯ ಗುರಿಯಾಗಿದೆ.

ಇನ್ನೂ ಶಾಲಾ-ಕಾಲೇಜು ಬಳಿ ವ್ಯಾಪಕ ಪ್ರಮಾಣದಲ್ಲಿ ಸಂಚಾರ ದಟ್ಟಣೆಯಾಗುತ್ತಿದ್ದು, ಅದರ ನಿಯಂತ್ರಣ ಈ ಪೊಲೀಸರ ಪಾಲಿಗೆ ಸವಾಲಾಗಿದೆ. ಶಾಲಾ-ಕಾಲೇಜು ಬಳಿ ಅಪಘಾತ ಪ್ರಮಾಣ ತಪ್ಪಿಸುವುದಕ್ಕಾಗಿ ಅಲ್ಲಿ ಟ್ರಾಫಿಕ್ ಸಿಬ್ಬಂದಿ ನಿಯೋಜಿಸುವ ಸಾಧ್ಯತೆಗಳಿವೆ. ಶಾಲಾ-ಕಾಲೇಜು ಮಕ್ಕಳು ಲೈಸನ್ಸಪಡೆಯದೇ ವಾಹನ ಓಡಿಸುವುದು ಪೊಲೀಸರ ಗಮನಕ್ಕೆ ಬಂದಿದ್ದು, ಅದಕ್ಕೆ ಸಹ ಇದೀಗ ನಿಯಂತ್ರಣ ಬೀಳಲಿದೆ.

ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಟ್ರಾಫಿಕ್ ಠಾಣೆ ಸಿಬ್ಬಂದಿ ಮೊದಲ ಪ್ರಯತ್ನ ನಡೆಸಲಿದ್ದಾರೆ. ಇದಾದ ನಂತರ ಟ್ರಾಫಿಕ್ ನಿಯಮ ಹಾಗೂ ಅದನ್ನು ಉಲ್ಲಂಘಿಸುವವರಿಗೆ ಕಾನೂನಿನಲ್ಲಿರುವ ಶಿಕ್ಷೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಲಿದ್ದಾರೆ. ಆ ಬಗ್ಗೆ ಸಾಕಷ್ಟು ಪ್ರಚಾರ ನೀಡಿದ ನಂತರ ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಪ್ರಕರಣಗಳನ್ನು ದಾಖಲಿಸಲಿದ್ದಾರೆ.

ಇದರೊಂದಿಗೆ ನಗರ ಪ್ರದೇಶದಲ್ಲಿ ನಡೆಯುವ ಅಪಘಾತ ಪ್ರಕರಣಗಳು ಸಹ ಈ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ. ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಪೊಲೀಸರು ಚಿಂತನೆ ನಡೆಸಿ, ಆ ಬಗ್ಗೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸಲಹೆಗಳನ್ನು ನೀಡುತ್ತಾರೆ.

ಶಿರಸಿಯಲ್ಲಿ ಇಷ್ಟು ದಿನಗಳವರೆಗೆ ಖಾಕಿ ಬಣ್ಣದ ಪೊಲೀಸರು ಮಾತ್ರ ಕಾಣಿಸುತ್ತಿದ್ದರು. ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಹಲವು ಕೆಲಸಗಳನ್ನು ಅವರೇ ನಿಭಾಯಿಸುತ್ತಿದ್ದರು. ಆದರೆ, ಇನ್ಮುಂದೆ ಬಿಳಿ ಬಟ್ಟೆ ಧರಿಸಿದ ಪೊಲೀಸರು ಸಹ ಈ ಊರಿನಲ್ಲಿ ಕಾಣಲಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಅವರು ಶಿಸ್ತು ಕ್ರಮ ಜರುಗಿಸಲಿದ್ದಾರೆ.

ShareSendTweetShare
Previous Post

ಮಕ್ಕಳ ಜೊತೆ ಬಿಸಿಯೂಟ ಸವಿದ ಶಿಕ್ಷಣಾಧಿಕಾರಿ!

Next Post

ಹೊಟ್ಟೆ ನೋವು: ಮಾತ್ರೆ ತಿಂದು ಪ್ರಾಣಬಿಟ್ಟ ನಿವೃತ್ತ ಶಿಕ್ಷಕ!

Next Post
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಹೊಟ್ಟೆ ನೋವು: ಮಾತ್ರೆ ತಿಂದು ಪ್ರಾಣಬಿಟ್ಟ ನಿವೃತ್ತ ಶಿಕ್ಷಕ!

ಮರದಿಂದ ಬಿದ್ದ ಸೊಪ್ಪು ಕಡಿಯುವ ಕಾರ್ಮಿಕ: ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರು!

Hillside harvesting | Late night raid by officials: Two JCBs seized!

ಗುಡ್ಡ ಕಟಾವು | ತಡರಾತ್ರಿ ಅಧಿಕಾರಿಗಳ ದೌಡು: ಎರಡು ಜೆಸಿಬಿ ವಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.