ಶಿರಸಿಯಲ್ಲಿ ನಡೆದ ಯುಗಾದಿ ಮೆರವಣಿಗೆಯಲ್ಲಿ ಭಾಗಿಯಾದ ಮುಸ್ಲಿಂ ಸಮುದಾಯದವರು ಪುಷ್ಪ ಮಳೆ ಸುರಿಸಿದ್ದಾರೆ. ಜೊತೆಗೆ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ವಿವಿಧ ಬಗೆಯ ತಿನಿಸುಗಳನ್ನು ನೀಡಿ ಸತ್ಕರಿಸಿದ್ದಾರೆ.
ಯುಗಾದಿ ಹಬ್ಬದ ಹಿನ್ನಲೆ ಶಿರಸಿಯಲ್ಲಿ ಸಾವಿರಾರು ಜನ ಶೋಭಾಯಾತ್ರೆ ನಡೆಸಿದರು. ಹಿಂದು ಸಮುದಾಯದವರ ತಲೆ ಮೇಲೆ ಮುಸ್ಲಿಂ ಸಮುದಾಯದವರು ಹೂವುಗಳನ್ನು ಚಿಮ್ಮಿಸಿ ಸಂತಸವ್ಯಕ್ತಪಡಿಸಿದರು. ಈ ವೇಳೆ ಅನೇಕರು ಹಿಂದು ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು. ಮೆರವಣಿಗೆಗಾಗಿ ಕಾದ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ತಂಪು ಪಾನೀಯವನ್ನು ವಿತರಿಸಿದರು. ಹಣ್ಣುಗಳನ್ನು ನೀಡಿ ಉಪಚರಿಸಿದರು.
`ಶಿರಸಿಯಲ್ಲಿ ಮೊದಲಿನಿಂದಲೂ ಹಿಂದು-ಮುಸ್ಲಿo ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಈ ಬಾಂದವ್ಯವನ್ನು ಹಾಗೇ ಉಳಿಸಿಕೊಳ್ಳುವುದಕ್ಕಾಗಿ ನಾವು ಯುಗಾದಿ ಹಬ್ಬ ಆಚರಿಸುವವರಿಗೆ ಬೆಂಬಲವಾಗಿ ನಿಂತಿದ್ದೇವೆ’ ಎಂದು ಮುಸ್ಲಿಂ ಮುಖಂಡರು ತಿಳಿಸಿದರು. ಹೂ ಮಳೆ ಸುರಿಸಿದ ವಿಡಿಯೋ ವೈರಲ್ ಆಗಿದ್ದು, ಹಿಂದು-ಮುಸ್ಲಿA ಭಾವೈಕ್ಯತೆಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




