ಕಾರವಾರದ ಸಾಗರ ಅಧ್ಯಯನ ಕೇಂದ್ರಕ್ಕೆ ಹೊಸ ಯಂತ್ರವೊoದು ಬಂದಿದೆ. ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಅಧ್ಯಯನಕ್ಕೆ ಈ ಯಂತ್ರ ನೆರವಾಗಲಿದೆ.
2024ರ ಫೆಬ್ರವರಿ ತಿಂಗಳಲ್ಲಿ ಅಲ್ಲಿದ್ದ ಹಳೆಯ ಯಂತ್ರ ಕಾಣೆಯಾಗಿತ್ತು. ಹೀಗಾಗಿ ಸಮುದ್ರ ಅಧ್ಯಯನಕ್ಕೆ ಸಮಸ್ಯೆ ಉಂಟಾಗಿತ್ತು. ಇದೀಗ ಹೊಸ ಯಂತ್ರ ತರಿಸಿದ್ದರಿಂದ ಅಧ್ಯಯನಕಾರರಿಗೆ ಅನುಕೂಲವಾಗಲಿದೆ. ಸಮುದ್ರದ ವಾತಾವರಣ ಹಾಗೂ ಯಾವ ಮೀನುಗಳು ಎಲ್ಲಿವೆ? ಎನ್ನುವುದರ ಬಗ್ಗೆ ಈ ಯಂತ್ರ ಮಾಹಿತಿ ನೀಡುತ್ತದೆ. ಶೇ 90ರಷ್ಟು ಮಾಹಿತಿ ಖಚಿತವಾಗಿರುತ್ತದೆ. ಹೀಗಾಗಿ ಈ ಯಂತ್ರದಿoದ ಮೀನುಗಾರರಿಗೆ ಸಹ ಅನುಕೂಲವಾಗಲಿದೆ.
ಈ ಬಗ್ಗೆ ಸಾಗರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೆ ಎಲ್ ರಾಥೋಡ್ ಮಾಹಿತಿ ನೀಡಿದರು. `ಕಡಲ ತೀರದಲ್ಲಿದ್ದ ವೇವ್ ಗೈಡ್ ಬಾಯ್ ಯಂತ್ರವು ಕಳೆದು ಹೋಗಿತ್ತು. ಹೀಗಾಗಿ ಇದೀಗ ನೆದರ್ಲ್ಯಾಂಡಿನಿAದ ಹೊಸ ಯಂತ್ರ ತರಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಹಳೆಯ ಯಂತ್ರ ಕಳೆದುಹೋದ ಕಾರಣ ಸಮುದ್ರದ ವಾತಾವರಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಒಂದು ವರ್ಷದ ದಾಖಲೆಗಳು ಸಿಗುತ್ತಿರಲಿಲ್ಲ. ಇದೀಗ ಮಾಹಿತಿ ಪಡೆದುಕೊಳ್ಳಲು ಹೊಸ ಯಂತ್ರವನ್ನು ಅಳವಡಿಸಲಾಗುತ್ತಿದೆ’ ಎಂದು ಹೇಳಿದರು.
ಹೊಸ ಯಂತ್ರದ ಸ್ಯಾಟಲೈಟ್ ಪ್ರಯೋಗ ಮುಗಿದಿದೆ. ಯಂತ್ರದಿoದ ಸಂದೇಶಗಳು ಸರಿಯಾಗಿ ಸಿಗುತ್ತಿದೆ. ಹೀಗಾಗಿ ಅದನ್ನು ಇಲ್ಲಿನ ಲೈಟ್ ಹೌಸ್ ಬಳಿ ಇಡಲು ಸಿದ್ಧತೆ ನಡೆದಿದೆ’ ಎಂದವರು ತಿಳಿಸಿದರು.