ಹೊನ್ನಾವರದ ಚಂದಾವರ ಹೊಳೆಗೆ ಮೀನು ಹಿಡಿಯಲು ಹೋದ ರಾಮ ದೇಶಭಂಡಾರಿ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಹೊನ್ನಾವರದ ಕಡತೋಕ ಜಡ್ಡಿಗದ್ದೆಯಲ್ಲಿ ರಾಮ ಸುಬ್ರಾಯ ದೇಶಭಂಡಾರಿ (68) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಆಗಾಗ ಬಲೆ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿದ್ದರು.
ಕೆಕ್ಕಾರ ಗ್ರಾಮದ ಲಕ್ಕುಮನೆ ಕೇರಿಯಲ್ಲಿ ರಾಮ ದೇಶಭಂಡಾರಿ ಅವರಿಗೆ ತೋಟವಿತ್ತು. ತೋಟದ ಅಂಚಿನಲ್ಲಿ ಚಂದಾವರ ಹೊಳೆ ಹರಿಯುತ್ತಿತ್ತು. ಏಪ್ರಿಲ್ 2ರಂದು ರಾತ್ರಿ ಅವರು ಮೀನು ಹಿಡಿಯಲು ಹೋಗಿದ್ದರು. ಆದರೆ, ಆ ದಿನ ಅವರು ಮರಳಿ ಬರಲಿಲ್ಲ.
ಏಪ್ರಿಲ್ 4ರಂದು ಹೊಳೆ ಅಂಚಿನ ಪ್ರದೇಶದಲ್ಲಿ ರಾಮ ದೇಶಭಂಡಾರಿ ಅವರ ಶವ ಸಿಕ್ಕಿತು. ಮೀನು ಹಿಡಿಯಲು ಬಲೆ ಹಾಕಿದಾಗ ಅವರು ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನಪ್ಪಿದ್ದರು. ಈ ಬಗ್ಗೆ ಅವರ ಮಗ ಮಂಜುನಾಥ ದೇಶಭಂಡಾರಿ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.







