ಹಳಿಯಾಳದಲ್ಲಿ ಬೈಕಿಗೆ ಟಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಧಾರವಾಡ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ.
ಮಾರ್ಚ 3ರಂದು ತುಕಾರಾಮ ಕುಬೇರರ (18) ಎಂಬಾತರು ಇನ್ನೂ ನೊಂದಣಿಯೂ ಆಗದ ಟಾಕ್ಟರ್ ಓಡಿಸುತ್ತಿದ್ದರು. ಹಳಿಯಾಳದ ಡವಗೇರಿ ಕೆರೆ ಹತ್ತಿರ ಅವರು ಟಾಕ್ಟರಿನ ವೇಗ ಹೆಚ್ಚಿಸಿದರು. ಕಿಲ್ಲೆಯಿಂದ ಹಳಿಯಾಳ ಕಡೆ ಬರುತ್ತಿದ್ದ ಬೈಕಿಗೆ ಅವರ ಟಾಕ್ಟರ್ ಡಿಕ್ಕಿ ಹೊಡೆಯಿತು.
ಪರಿಣಾಮ ಹೊಸೂರುಗಲ್ಲಿಗೆ ಬೈಕಿನಲ್ಲಿ ಹೋಗುತ್ತಿದ್ದ ಛತ್ರಿನಾಳದ ಸಂದೇಶ ಜಾವಳೆಕರ್ (21) ಹಾಗೂ ತೇನಾಜಿಗಲ್ಲಿಯ ಕಾರ್ತಿಕ್ ಸಾಂಬ್ರೇಕರ್ ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡರು. ಅವರನ್ನು ಧಾರವಾಡ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವಾಗಲೇ ಸಾವನಪ್ಪಿದರು.
ಟಾಕ್ಟರ್ ಓಡಿಸುತ್ತಿದ್ದವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.







