ಶಿರಸಿಯ ಕಾಗೇರಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಸಾವನಪ್ಪಿದೆ. ವಿದ್ಯುತ್ ಅವಘಡದಿಂದ ಚಿರತೆ ಸಾವನಪ್ಪಿರುವುದು ಖಚಿತವಾಗಿದೆ.
ಕಾಗೇರಿ ಗ್ರಾಮ ಹಲಸಿನಕೈ ಬೆಟ್ಟದಲ್ಲಿ ಶುಕ್ರವಾರ ಚಿರತೆಯ ಶವ ಸಿಕ್ಕಿದೆ. ನಾಲ್ಕು ವರ್ಷದ ಗಂಡು ಚಿರತೆ ಇದಾಗಿದೆ. ಅರಣ್ಯ ಸರ್ವೇ ನಂಬರ್ 160ರಲ್ಲಿ ಚಿರತೆ ಸಾವನಪ್ಪಿದ ಸುದ್ದಿ ಕೇಳಿ ಅರಣ್ಯ ಸಿಬ್ಬಂದಿ ಅಲ್ಲಿ ದೌಡಾಯಿಸಿದರು. ಚಿರತೆಯ ದೇಹ ಕೊಳೆತ ಸ್ಥಿತಿಯಲ್ಲಿರುವುದು ಕಾಣಿಸಿತು.
ಪಶುವೈಧ್ಯ ಡಾ ಪ್ರಶಾಂತ ಅವರು ಚಿರತೆಯ ಶವರ ಪರೀಕ್ಷೆ ಮಾಡಿದರು. ಆ ವೇಳೆ ವಿದ್ಯುತ್ ಆಘಾತದಿಂದ ಚಿರತೆ ಸಾವನಪ್ಪಿರುವ ಸತ್ಯ ಹೊರಬಂದಿತು. ಡಿಎಫ್‌ಓ ಅಜ್ಜಯ್ಯ, ಎಸಿಎಫ್ ಎಸ್ ಎಸ್ ನಿಂಗಾಣಿ ಕಾನೂನು ಕ್ರಮ ಜರುಗಿಸಿದರು. ಆರ್‌ಎಫ್‌ಓ ಗಿರೀಶ ನಾಯ್ಕ ಸ್ಥಳ ಪರಿಶೀಲನೆ ನಡೆಸಿ ಚಿರತೆಯ ದೇಹ ವಿಲೆವಾರಿ ನಡೆಸಿದರು.