6

ಕಮಿಷನ್ ಮೇಲೆ ಆಸೆ: ವ್ಯಾಪಾರಿಯ ತಲೆತಿರುಗಿಸಿದ ಮಟ್ಕಾ ಬುಕ್ಕಿ!

ಶಿರಸಿ ಎಕ್ಕಂಬಿಯ ಕಾಟೆಮನೆಗೆ ಹೋಗುವ ಕ್ರಾಸಿನಲ್ಲಿ ಮಟ್ಕಾ ಆಡಿಸುತ್ತಿದ್ದ ಶಂಕರ ಪಟಗಾರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಮಟ್ಕಾ ಬುಕ್ಕಿ ರಾಘು ಶೆಟ್ಟಿ ಕಮಿಶನ್ ಆಸೆ ತೋರಿಸಿದ್ದರಿಂದ ಈ ಕೆಲಸ ಮಾಡುತ್ತಿರುವುದಾಗಿ ಶಂಕರ ಪಟಗಾರ ಬಾಯ್ಬಿಟ್ಟಿದ್ದಾರೆ.

ಶಿರಸಿ ಶಾಂತಿನಗರದ ಶಂಕರ ಪಟಗಾರ (50) ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡಿಕೊಂಡಿದ್ದರು. ಆ ವ್ಯಾಪಾರದಿಂದ ಜೀವನ ನಡೆಸುವುದು ಕಷ್ಟವಾಗಿದ್ದರಿಂದ ಅವರು ಸೊರಗಿದ್ದರು. ಆಗ, ರಾಘು ಶೆಟ್ಟಿ ಅವರ ಮಟ್ಕಾ ಕಮಿಶನ್ ಆಸೆ ಶಂಕರ್ ಪಟಗಾರ್ ಅವರಿಗೆ ಆಸರೆಯಾಯಿತು. ಹೀಗಾಗಿ ಶಂಕರ ಪಟಗಾರ್ ಅವರು ಕಮಿಶನ್ ಆಧಾರದಲ್ಲಿ ಮಟ್ಕಾ ಆಡಿಸುವುದನ್ನು ರೂಢಿಸಿಕೊಂಡಿದ್ದರು.

ಆದರೆ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಅವರು ಇದನ್ನು ಸಹಿಸಿಕೊಳ್ಳಲಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಕ್ರೀಡೆ ನಡೆಯುತ್ತಿರುವ ಬಗ್ಗೆ ಅರಿತು ಅವರು ಏಪ್ರಿಲ್ 21ರ ರಾತ್ರಿ ಶಂಕರ್ ಪಟಗಾರ ಅವರ ಮೇಲೆ ದಾಳಿ ಮಾಡಿದರು. ಕಾಟೆಮನೆ ಬಳಿಯಿರುವ ಚರ್ಚಿನ ಹತ್ತಿರ ಮಟ್ಕಾ ಆಡಿಸುತ್ತಿದ್ದ ಶಂಕರ ಪಟಗಾರ ಅವರು ಪೊಲೀಸರ ದಾಳಿಗೆ ತತ್ತರಿಸಿ ಹೋದರು.

1ರೂಪಾಯಿಗೆ 80ರೂ ಕೊಡುವುದಾಗಿ ನಂಬಿಸಿ ಆ ದಿನ ಜನರಿಂದ ಸಂಗ್ರಹಿಸಿದ್ದ 1200ರೂಪಾಯಿಯನ್ನು ಅವರು ಪೊಲೀಸರಿಗೆ ಒಪ್ಪಿಸಿದರು. `ಇದರಲ್ಲಿ ನಂದೇನೂ ತಪ್ಪಿಲ್ಲ’ ಎನ್ನುತ್ತ ರಾಘು ಶೆಟ್ಟಿ ಅವರ ಹೆಸರು ಹೇಳಿದರು. ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನುಕ್ರಮ ಜರುಗಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page