ಅಂಕೋಲಾ ವಂದಿಗೆಯ ಬೊಮ್ಮಯ್ಯ ಆಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಾಯಿ ಕುಡಿದು ಮನೆಯಲ್ಲಿ ಸದಾ ಗಲಾಟೆ ಮಾಡುತ್ತಿದ್ದ ಅವರು ಏಕಾಏಕಿ ಮನೆಯಲ್ಲಿದ್ದವರೆಲ್ಲರನ್ನು ಹೊರದಬ್ಬಿ ಪ್ರಾಣ ಬಿಟ್ಟಿದ್ದಾರೆ.
45 ವರ್ಷದ ಬೊಮ್ಮಯ್ಯ ಆಗೇರ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ದಿನಾಲು ಸರಾಯಿ ಕುಡಿದು ಅವರು ಹೆಂಡತಿ ಮಕ್ಕಳ ಜೊತೆ ಜಗಳವಾಡುತ್ತಿದ್ದರು. ಏಪ್ರಿಲ್ 21ರಂದು ಸಹ ಸರಾಯಿ ಸೇವಿಸಿ ಮನೆಗೆ ಬಂದವರು ರಾತ್ರಿಯಿಡೀ ಜಗಳವಾಡಿದರು. ಮನೆಯಲ್ಲಿದ್ದ ಅವರ ಪತ್ನಿ ಅನಿತಾ ಆಗೇರ್ ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿದರು. ಮನೆಯ ಬಾಗಿಲು ಹಾಕಿ ಒಳಗಡೆಯಿಂದ ಚಿಲಕವನ್ನು ಹಾಕಿಕೊಂಡರು.
ಆ ದಿನ ರಾತ್ರಿ 9 ಗಂಟೆ ವೇಳೆಗೆ ಅನಿತಾ ಆಗೇರ್ ಅವರು ಮನೆಯ ಬಾಗಿಲು ಒಡೆದು ಒಳಗೆ ಹೊದರು. ಆಗ ಅಲ್ಲಿ ಬೊಮ್ಮಯ್ಯ ಆಗೇರ್ ಹಗ್ಗದಿಂದ ನೇಣು ಹಾಕಿಕೊಂಡಿದ್ದರು. ಅವರನ್ನು ಅಂಕೋಲಾ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಬೊಮ್ಮಯ್ಯ ಆಗೇರ್ ಸಾವನಪ್ಪಿರುವ ಸುದ್ದಿ ತಿಳಿಸಿದರು.