ಅಂಕೋಲಾದಲ್ಲಿ ಮಟ್ಕಾ ಆಡಿಸುವವರನ್ನು ಪತ್ತೆ ಮಾಡಿದ ಪೊಲೀಸರು ಒಂದೇ ದಿನ ಹಲವು ಕಡೆ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟಿದ್ದಾರೆ.
ಏಪ್ರಿಲ್ 23ರಂದು ಶಿರೂರಿನ ನಾಗಪ್ಪ ಗೌಡ ಅವರು ಗೂಡಂಗಡಿಯಲ್ಲಿ ಮಟ್ಕಾ ಆಡಿಸುವಾಗ ಪಿಎಸ್‌ಐ ಉದ್ದಪ್ಪ ದರಪ್ಪನವರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ಶಿರೂರು ಬೀರ ದೇವಸ್ಥಾನದ ಹತ್ತಿರ ಅವರು ಮಟ್ಕಾ ಆಡಿಸುತ್ತಿದ್ದರು.
ಕೂಲಿ ಕೆಲಸ ಮಾಡಿಕೊಂಡಿದ್ದ ಅಂಕೋಲ ಬೆಳಂಬಾರದ ರಾಜು ಗೌಡ ಅವರು ಪೂಜಗೇರಿ ಸೇತುವೆ ಹತ್ತಿರ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಮೀನುಗಾರಿಕೆ ನಡೆಸುವ ಬೆಳಂಬಾರದ ಮಾರುತಿ ಖಾರ್ವಿ ಅವರು ಕುಂಬಾರಕೇರಿ ಕದಂಬೇಶ್ವರ ದೇವಸ್ಥಾನ ಕಟ್ಟೆಯ ಬಳಿ ಮಟ್ಕಾ ಆಡಿಸುವಾಗ ಪಿಎಸ್‌ಐ ಸುನೀಲ ಹುಲ್ಲೊಳ್ಳಿ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ.
ವಂದಿಗೆ ಡಿಪೋ ರಸ್ತೆ ಬಳಿ ಕಿರಾಣಿ ಅಂಗಡಿ ನಡೆಸುವ ಉದಯ ನಾಯ್ಕ ಅವರು ಮಟ್ಕಾ ಆಡಿಸುತ್ತಿದ್ದಾಗ ಪಿಐ ಚಂದ್ರಶೇಖರ ಮಠಪತಿ ದಾಳಿ ಮಾಡಿದ್ದಾರೆ. ಅಂಬಾರಕೊಡ್ಲದ ಮಂಜುನಾಥ ಗೌಡ ಅವರು ಸಹ ತಮ್ಮ ಕಿರಾಣಿ ಅಂಗಡಿ ಬಳಿ ಮಟ್ಕಾ ಆಡಿಸುತ್ತಾಗ ಸಿಕ್ಕಿ ಬಿದ್ದಿದ್ದಾರೆ. ಈ ಎಲ್ಲರ ಬಳಿಯಿದ್ದ ಹಣ, ಮಟ್ಕಾ ಪರಿಕ್ಕರ ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.





