6
  • Latest
The damaged road is finally repaired First success for Ananthamurthy's struggle!

ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ: ಅನಂತಮೂರ್ತಿ ಹೋರಾಟಕ್ಕೆ ಮೊದಲ ಯಶಸ್ಸು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ: ಅನಂತಮೂರ್ತಿ ಹೋರಾಟಕ್ಕೆ ಮೊದಲ ಯಶಸ್ಸು!

AchyutKumar by AchyutKumar
in ರಾಜ್ಯ
The damaged road is finally repaired First success for Ananthamurthy's struggle!

ಶಿರಸಿ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಪ್ರತಿಭಟನೆ ಶುರು ಮಾಡಿದ್ದು, ಪ್ರತಿಭಟನೆಗೂ ಮುನ್ನವೇ ಜಿಲ್ಲಾಡಳಿತ ಸಂದಾನ ಸಭೆ ನಡೆಸಿದೆ. ಸದ್ಯ 5 ಲಕ್ಷ ರೂ ವೆಚ್ಚದಲ್ಲಿ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ವಾಗ್ದಾನದ ಹಿನ್ನಲೆ ಹೋರಾಟಗಾರರು ಪ್ರತಿಭಟನೆ ಹಿಂಪಡೆದಿದ್ದಾರೆ.

ADVERTISEMENT

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಂತಮೂರ್ತಿ ಹೆಗಡೆ ಪ್ರತಿಭಟನೆ ಶುರು ಮಾಡಿದರು. ತಕ್ಷಣ ಶಿರಸಿ ಲೋಕೋಪಯೋಗಿ ಇಲಾಖೆ ಅಭಿಯಂತರ ಬಸವರಾಜ ಬಳ್ಳಾರಿ ಅವರನ್ನು ಕರೆಯಿಸಿದ ಜಿಲ್ಲಾಧಿಕಾರಿ ಊರಿನವರ ಸಮಸ್ಯೆ ಬಗ್ಗೆ ವರದಿಪಡೆದರು. ಅದಾದ ನಂತರ ಪ್ರತಿಭಟನಾಕಾರರನ್ನು ಕರೆಯಿಸಿ ಮಾತನಾಡಿಸಿದರು. `ಮಳೆಗಾಲ ಶುರುವಾಗುವ ಮುನ್ನ 5 ಲಕ್ಷ ರೂ ವೆಚ್ಚದಲ್ಲಿ ರಸ್ತೆ ರಿಪೇರಿ ಮಾಡಿಸುವುದು. ಮಳೆ ಮುಗಿದ ನಂತರ ಸಿಮೆಂಟ್ ರಸ್ತೆ ಮಾಡುವುದು’ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. `ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು’ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಅದಕ್ಕೂ ಒಪ್ಪಿಗೆ ಸೂಚಿಸಿತು.

ಈ ನಡುವೆ ಊರಿನವರ ಸಮಸ್ಯೆ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳ ಜೊತೆ ಫೋನಿನಲ್ಲಿ ಮಾತನಾಡಿದರು. `ಶಿರಸಿ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಮತ್ತಿಘಟ್ಟ ಕೆಳಗಿನ ಕೇರಿ ಸಮೀಪದ ಹಲವು ಊರುಗಳು ಕನಿಷ್ಟ ಸೌಕರ್ಯವೂ ಇಲ್ಲದೇ ನಲುಗಿದೆ. ಇಲ್ಲಿನ ಜನ ದಟ್ಟ ಕಾಡಿನೆ ಮಧ್ಯೆ ನಿತ್ಯವೂ ಭಯದ ಬದುಕು ಸಾಗಿಸುತ್ತಿದ್ದಾರೆ’ ಎಂಬ ವಿಷಯವನ್ನು ಮನವರಿಕೆ ಮಾಡಿದರು. `ಮಹಿಳೆಯರಿಗೆ ಸರ್ಕಾರ ನೀಡಿದ ಉಚಿತ ಬಸ್ ಪ್ರಯಾಣ ಐದು ಕಿಮೀ ಘಟ್ಟ ಹತ್ತಬೇಕು. ಗ್ರಾಮಗಳಿಗೆ ಇರುವ ಒಂದು ರಸ್ತೆ ಕಳೆದ ಮಳೆಗಾಲದಲ್ಲಿ ಭೂ ಕುಸಿತವಾಗಿ ಕಂದಕವಾಗಿ ನಿರ್ಮಾಣಗೊಂಡಿದ್ದರೂ ಜನಪ್ರತಿನಿಧಿಗಳು ಒಬ್ಬರೂ ಬರಲಿಲ್ಲ. ಶಿರಸಿ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎನ್ನುವ ಬಗ್ಗೆ ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದರು.

Advertisement. Scroll to continue reading.

`ಕಳೆದ ಮಳೆಗಾಲದ 15 ದಿನಗಳ ಕಾಲ ಊರು ದ್ವೀಪವಾಗಿತ್ತು. ಮರದಿಂದ ಬಿದ್ದವನನ್ನು ಕಂಬಳಿಯಲ್ಲಿ ಹೆಗಲಮೇಲೆ ಹೊತ್ತೊಯ್ದರೂ ಆತ ಬದುಕುಳಿಯಲಿಲ್ಲ’ ಎಂಬ ಸಂಗತಿ ಪ್ರತಿಭಟನೆಯಲ್ಲಿ ಪ್ರತಿಧ್ವನಿಸಿತು. ಮಾಡನಮನೆ, ಉಂಬಳಗೇರಿ, ಗುಂಡಪ್ಪೆ, ನರಸೆಬೈಲ್ ಮೊದಲಾದ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.

Advertisement. Scroll to continue reading.
Previous Post

ಆಗಿನ ಚಾಕಲೇಟು ವ್ಯಾಪಾರಿ ಇದೀಗ ಭಯ-ಉತ್ಪಾದಕ: ಮಕ್ಕಳ ಹುಟ್ಟಿಸುವುದೇ ಈತನ ಉಪಕಸುಬು!

Next Post

ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!

Next Post
A fight over a road An elderly couple fights for justice!

ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ