ಯಲ್ಲಾಪುರದ ಲಾಲಗುಳಿಯಲ್ಲಿ ಲೈಂಗಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಮಾಲಿನಿ ಪಟಗಾರ್ ಪ್ರಕರಣ ವಿಚಾರಣೆ ವೇಳೆ ಆರೋಪಿ ರೋಹಿದಾಸ ಪಟಗಾರ್ ವಿರುದ್ಧ ಸಮಗ್ರ ಸಾಕ್ಷ್ಯ ಸಂಗ್ರಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನಲೆ ರೋಹಿದಾಸ ಪಟಗಾರ ಅವರನ್ನು ನ್ಯಾಯಾಲಯ ಪ್ರಕರಣದಿಂದ ಬಿಡುಗಡೆ ಮಾಡಿದೆ.
ನರಸೂರಿನ ಮಾಲಿನಿ ಪಟಗಾರ ಅವರು ರಾಮಚಂದ್ರ ಪಟಗಾರ ಅವರನ್ನು ವರಿಸಿದ್ದರು. ರಾಮಚಂದ್ರ ಪಟಗಾರ ಅವರ ಅಣ್ಣನಾದ ರೋಹಿದಾಸ ಪಟಗಾರ ಅವರ ವಿರುದ್ಧ ಮಾಲಿನಿ ಪಟಗಾರ ಅವರು ಸಾಕಷ್ಟು ಆರೋಪ ಮಾಡಿದ್ದರು. ‘ತನ್ನ ಮೇಲೆ ರೋಹಿದಾಸ ಪಟಗಾರ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಜೊತೆಗೆ ದೈಹಿಕ ಹಲ್ಲೆ ಮಾಡಿದ್ದಾರೆ’ ಎಂದು ದೂರಿದ್ದರು. ಅದಾದ ನಂತರ ಮರಣ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದರು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿ ವಿವಿಧ ಸಾಕ್ಷಿಯನ್ನು ಸಂಗ್ರಹಿಸಿದ್ದರು. ಆದರೆ, ನ್ಯಾಯಾಲಯದಲ್ಲಿ ಆರೋಪ ಸಾಭೀತು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನ್ಯಾಯಾಲಯ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಿತು.