ಯಲ್ಲಾಪುರ ತಾಲೂಕಿನ ಮಂಚಿಕೆರೆ ಬಳಿ ಅಗ್ನಿಶಾಮಕ ವಾಹನಕ್ಕೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಶನಿವಾರ ಸಂಜೆ ಈ ಅಪಘಾತ ನಡೆದಿದೆ. ಆ ಕಾರು ಮೈಸೂರಿನ ಕಡೆ ಚಲಿಸುತ್ತಿತ್ತು. ಶಿರಸಿ ಕಡೆ ಅಗ್ನಿಶಾಮಕ ವಾಹನ ಚಲಿಸುತ್ತಿತ್ತು. ಮಂಚಿಕೇರಿ ಬಳಿ ಎರಡು ವಾಹನಗಳ ನಡುವೆ ಅಪಘಾತ ನಡೆಯಿತು.
ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡರು. ಜೊತೆಗೆ ಕಾರು ಕೆಲ ದೂರದವರೆಗೆ ಸಂಚರಿಸಿ, ತಿರುಗಿ ಬಿದ್ದಿದೆ. ಈ ವೇಳೆ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದೆ. ಅಗ್ನಿಶಾಮಕ ವಾಹನ ಸಹ ಜಖಂ ಆಗಿದೆ.