ಧಾರವಾಡದಿಂದ ದಾಂಡೇಲಿಗೆ ಬಂದಿದ್ದ ನಿವೃತ್ತ ಉಪನ್ಯಾಸಕರೊಬ್ಬರು ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ್ದಾರೆ.
ಜಗದೀಶ ಅಂಗಡಿ (65) ಅವರು ಧಾರವಾಡದ ಸಾತನಗೇರಿಯಲ್ಲಿ ವಾಸವಾಗಿದ್ದರು. ಉಪನ್ಯಾಸಕರಾಗಿದ್ದ ಅವರು ನಿವೃತ್ತಿ ನಂತರ ವಿಶ್ರಾಂತಿಯ ಜೀವನಕ್ಕೆ ಒಗ್ಗಿಕೊಂಡಿದ್ದರು. ಮೇ 2ರಂದು ಅವರು ಕುಟುಂಬದ ಸದಸ್ಯರು ಸೇರಿ 12ಜನರ ಜೊತೆ ದಾಂಡೇಲಿ ಪ್ರವಾಸಕ್ಕೆ ಬಂದಿದ್ದರು.
ಗಣೇಶಗುಡಿಯಲ್ಲಿ ಅವರು ಕಾಳಿ ನದಿಗೆ ಇಳಿದು ರಾಪ್ಟಿಂಗ್ ಚಟುವಟಿಕೆಯಲ್ಲಿ ಭಾಗವಹಿಸಿದರು. ಹೆಂಡತಿ-ಮಕ್ಕಳ ಜೊತೆ ಇಡೀ ದಿನ ನೀರಾಟ ನಡೆಸಿದ್ದರು. ರಾಪ್ಟಿಂಗ್ ಮುಗಿಸಿ ಮರಳಿದ ಜಗದೀಶ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿತು.
ಆಗ ಅವರನ್ನು ದಾಂಡೇಲಿ ಆಸ್ಪತ್ರೆಗೆ ಕಾಣಿಸಲಾಯಿತು. ಆ ವೇಳೆ ಅವರು ಕಣ್ಣು ತೆರೆದಿದ್ದರೂ ಉಸಿರಾಡುತ್ತಿರಲಿಲ್ಲ. ಹೀಗಾಗಿ ಜಗದೀಶ ಅಂಗಡಿ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು.