ಯುದ್ಧದಂಥಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಇದೀಗ ನಾಗರಿಕ ಸೈನಿಕರ ಸಹಾಯ ಯಾಚಿಸಿದೆ.
ಸಿವಿಲ್ ಡಿಫೆನ್ಸ್ ಆಕ್ಟ್ 1968ರಲ್ಲಿ ಪ್ರತಿ ನೂರು ನಾಗರಿಕರಿಗೆ ಒಬ್ಬರಂತೆ ಸ್ವಯಂ ಸೇವಕ ಸೈನಿಕರ ನೋಂದಣಿಗೆ ಅವಕಾಶವಿದ್ದು, ದೇಶದ ರಕ್ಷಣೆಗಾಗಿ ನಾವು-ನೀವೆಲ್ಲರೂ ಇದೀಗ ಸೈನಿಕರಾಗಿ ಕರ್ತವ್ಯ ನಿಭಾಯಿಸಲು ಅವಕಾಶ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಯಂ ಸೇವಕ ಸೈನಿಕರ ನೇಮಕಾತಿ ಪ್ರಕ್ರಿಯೆ ಮೇ 9ರಿಂದ ಶುರುವಾಗಲಿದೆ. ಜೂನ್ 9ರವರೆಗೂ ಆಸಕ್ತರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಟರ ಕಚೇರಿಯಲ್ಲಿ ಅರ್ಜಿ ಸಿಗುತ್ತದೆ. ಆನ್‌ಲೈನ್ ಮೂಲಕ ಸಹ ಅರ್ಜಿ ನಮೂನೆ ಸ್ವೀಕರಿಸಬಹುದಾಗಿದ್ದು,http://hgcd.karnataka.gov.in/ ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಬಹುದಾಗಿದೆ.
`ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 4ನೇ ತರಗತಿ ಉತ್ತೀರ್ಣರಾಗಿರಬೇಕು. 18 ವರ್ಷ ಮೇಲ್ಪಟ್ಟಿರಬೇಕು. ದೈಹಿಕವಾಗಿ ಸಧೃಡರಾಗಿರಬೇಕು’ ಎಂಬ ನಿಯಮಗಳಿವೆ. `ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಪ್ರತಿ ಮತ್ತು ಅಂಕಪಟ್ಟಿ ಜೊತೆಗಿರಿಸುವುದು ಕಡ್ಡಾಯ. ಶಾಲಾ ವರ್ಗಾವಣೆ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9110683910