ಮೇ 12ರಂದು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಬಾಂಬ್ ಸ್ಪೋಟ, ಕಟ್ಟಡ ಕುಸಿತ ಹಾಗೂ ಅಗ್ನಿ ಅವಘಡಗಳು ನಡೆಯಲಿದೆ. ಆದರೆ, ಇದರಿಂದ ಜನರಿಗೆ ಯಾವುದೇ ಸಮಸ್ಯೆ ಇಲ್ಲ!
ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಿಲ್ಲಾಡಳಿತ ಐದು ಬಗೆಯ ಅಣಕು ಕಾರ್ಯಾಚರಣೆ ನಡೆಸುತ್ತಿದೆ. ಉತ್ತರ ಕನ್ನಡ ಜಿಲ್ಲೆ ಅತ್ಯಂತ ಉದ್ದವಾದ ಕರಾವಳಿ ತೀರವನ್ನು ಹೊಂದಿದೆ. ಅನೇಕ ಸೂಕ್ಷö್ಮ ಪ್ರದೇಶಗಳನ್ನು ಒಳಗೊಂಡಿದೆ. ಹೀಗಾಗಿ ತುರ್ತು ಸನ್ನಿವೇಶದಲ್ಲಿ ಜನರ ರಕ್ಷಣೆ ಮಾಡುವುದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ.ಇದಕ್ಕಾಗಿ ಮೇ 12ರ ದಿನಾಂಕವನ್ನು ಆಯ್ದುಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ `ಆಪರೇಶನ್ ಅಭ್ಯಾಸ್’ ಎಂದು ಹೆಸರಿಡಲಾಗಿದೆ.
`ಈ ಕಾರ್ಯಾಚರಣೆ ಸಂಪೂರ್ಣವಾಗಿ ಅಣಕು ಪ್ರದರ್ಶನ. ಇದರಿಂದ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸ್ಪಷ್ಠಪಡಿಸಿದ್ದಾರೆ. `ಸರ್ಕಾರ ಸೂಚಿಸಿದ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಯಾರೂ ಗಾಬರಿಗೆ ಒಳಗಾಗದೇ ಸಹಕರಿಸಬೇಕು’ ಎಂದವರು ಮನವಿ ಮಾಡಿದ್ದಾರೆ.
ಅಣಕು ಕಾರ್ಯಾಚರಣೆಯ ರೂಪರೇಷೆಗಳ ಪ್ರಕಾರ ಮೇ 12ರಂದು ಮಧ್ಯಾಹ್ನ 4 ಗಂಟೆಗೆ ಬಿಣಗಾದ ಗ್ರಾಸಿಂ ಇಂಡಸ್ಟಿçÃಯಲ್ಲಿ ಕಟ್ಟಡ ಕುಸಿತ ಸಂಭವಿಸುತ್ತದೆ. ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಹಾಗೂ ಗಾಯಗೊಂಡವರಿಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ಎನ್ ಡಿ ಆರ್ ಎಫ್, ಅಗ್ನಿಶಾಮಕ ದಳ, ಗ್ರಾಸಿಂ ಟೀಮ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ನೌಕಾನೆಲೆ ಬಳಿಯ ಅಮದಹಳ್ಳಿ ಸಿವಿಲ್ ಕಾಲೋನಿಯಲ್ಲಿ ಅದೇ ದಿನ ಸಂಜೆ 5 ಗಂಟೆಗೆ ಬೆಂಕಿ ಅವಘಡನ ನಡೆಯುತ್ತದೆ. ಆಗ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಜನರನ್ನು ರಕ್ಷಿಸಿ, ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಜೊತೆಗೆ ಮಧ್ಯಾಹ್ನ 4 ಗಂಟೆಗೆ ಕೈಗಾ ಅಣು ವಿದ್ಯುತ್ ಸ್ಥಾವರದ ಒಳಗಡೆ ಅಗ್ನಿ ಅವಘಡ ಸಂಭವಿಸಲಿದ್ದು, ಸಂಜೆ 6 ಗಂಟೆಯ ಒಳಗಾಗಿ ಅಲ್ಲಿಯೂ ಅಗ್ನಿಶಾಮಕ ಸಿಬ್ಬಂದಿ ಅನಾಹುತ ತಡೆಯಲಿದ್ದಾರೆ.
ನದಿ ಪಾತ್ರದಲ್ಲಿನ ಅನಾಹುತಕ್ಕಾಗಿ ಅರಟುಗಾ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿಯ ಜನರನ್ನು ಸಿದ್ದರ ಗ್ರಾಮದ ಬಿಸಿಎಂ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗುತ್ತದೆ. ಇನ್ನೂ ಸಂಜೆ 6 ಗಂಟೆಗೆ ರವೀಂದ್ರ ನಾಥ್ ಟಾಗೋರ್ ತೀರದಲ್ಲಿ ಬಾಂಬ್ ದಾಳಿಯಾಗಲಿದೆ. ಆಗ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಸಿದ್ಧತೆ ನಡೆದಿದೆ. ರಾತ್ರಿ 7.30 ರಿಂದ 8 ಗಂಟೆಯ ಅವಧಿಯಲ್ಲಿ ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಮತ್ತು ಕೈಗಾ ಟೌನ್‌ಶಿಪ್‌ನಲ್ಲಿ ಬ್ಲಾಕ್ ಔಟ್ ನಡೆಯಲಿದೆ. `ಈ ವೇಳೆ ನಾಗರೀಕರು ಸ್ವಯಂ ಪ್ರೇರಣೆಯಾಗಿ ತಮ್ಮ ಮನೆಯ ಲೈಟ್‌ಗಳನ್ನು ಆಫ್ ಮಾಡಿ, ಸುರಕ್ಷಿತವಾಗಿ ಮನೆಯೊಳಗೆ ಇರಬೇಕು’ ಎಂದು ಸೂಚಿಸಲಾಗಿದೆ.