ಮದ್ಯದ ನಶೆಯಲ್ಲಿ ಪತ್ನಿಗೆ ಪೀಡಿಸುತ್ತಿದ್ದ ಬನವಾಸಿಯ ಹುವ್ಯಾ ಚಲುವಾದಿ ಅವರು ಕುಟುಂಬದ ಸದಸ್ಯರೆಲ್ಲರೂ ನೆಂಟರ ಮನೆಗೆ ಹೋದಾಗ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾರೆ.
ಶಿರಸಿಯ ಬನವಾಸಿಯ ಬೆಂಗಳೆಯಲ್ಲಿ ಹುವ್ಯಾ ಚಲುವಾದಿ (55) ಕೂಲಿ ಕೆಲಸ ಮಾಡಿಕೊಂಡಿದ್ದರು. ನಿತ್ಯ ಸರಾಯಿ ಕುಡಿಯುವ ಚಟ ಹೊಂದಿದ ಅವರು ಮನೆಗೆ ಬಂದು ಪತ್ನಿಗೆ ಹಿಂಸಿಸುತ್ತಿದ್ದರು. ಇದನ್ನು ಸಹಿಸದ ಮಕ್ಕಳು ಹುವ್ಯಾ ಚಲುವಾದಿ ಅವರಿಗೆ ಸಾಕಷ್ಟು ಬುದ್ದಿ ಹೇಳಿದ್ದರು. ಆದರೂ, ಅದನ್ನು ಹುವ್ಯಾ ಚಲುವಾದಿ ಕಿವಿಗೆ ಹಾಕಿಕೊಂಡಿರಲಿಲ್ಲ.
ಮೇ 6ರಂದು ಸಹ ಹುವ್ಯಾ ಚಲುವಾದಿ ಮದ್ಯ ಸೇವಿಸಿ ಮನೆಗೆ ಬಂದಿದ್ದರು. ಆ ದಿನ ಮನೆಯಲ್ಲಿ ದೊಡ್ಡ ಜಗಳ ನಡೆದಿದ್ದು, ಹುವ್ಯಾ ಚಲುವಾದಿ ಅವರ ಮಗಳು ಅಕ್ಷತಾ ಚಲುವಾದಿ ಅವರ ಅಕ್ಕನ ಮನೆಗೆ ಹೊರಟರು. ತಮ್ಮ ತಾಯಿಯನ್ನು ಸಹ ಅವರು ಜೊತೆಗೆ ಕರೆದುಕೊಂಡು ಹೋದರು. ಇದರಿಂದ ಸಿಟ್ಟಾದ ಹುವ್ಯಾ ಚಲುವಾದಿ ಅಕ್ಕನ ಮನೆಗೆ ಬಂದು ಗಲಾಟೆ ಮಾಡಿದರು. ಅದಾದ ನಂತರ ಮನೆಗೆ ಮರಳಿದ್ದರು.
ಮನೆಯಲ್ಲಿ ಯಾರೂ ಇಲ್ಲದಿರುವಾಗ ಹುವ್ಯಾ ಚಲುವಾದಿ ಅಡುಗೆ ಮನೆಗೆ ಹೋದರು. ಮನೆಯ ಎಳೆಗೆ ಹಗ್ಗ ಕಟ್ಟಿ ಅವರು ನೇಣು ಬಿಗಿದುಕೊಂಡರು. ಅಕ್ಕನ ಮನೆಯಿಂದ ಮರಳಿದ ಅವರ ಕುಟುಂಬ ಸದಸ್ಯರು ಇದರಿಂದ ಆಘಾತಕ್ಕೆ ಒಳಗಾದರು. ಹುವ್ಯಾ ಚಲುವಾದಿ ಅವರನ್ನು ಬದುಕಿಸುವುದಕ್ಕಾಗಿ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರೊಳಗೆ ಹುವ್ಯಾ ಚಲುವಾದಿ ಕೊನೆಉಸಿರೆಳೆದಿದ್ದರು.
ಗಮನಿಸಿ: ಆತ್ಮಹತ್ಯೆ ಅಪರಾಧ





