ಶಿರಸಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಯುವಕನೊಬ್ಬ ಸಾವನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ.
ಬನವಾಸಿಯ ಮದುರವಳ್ಳಿಯಲ್ಲಿ ಗುರುವಾರ ಬೈಕುಗಳ ನಡುವೆ ಅಪಘಾತವಾಗಿದೆ. ಬೆಂಗಳೆ ಬಳಿಯ ಮಂಟಲಗಾನದ ತಿಮ್ಮಪ್ಪ ದೇವಾಡಿಗ (30) ಅಪಘಾತದಲ್ಲಿ ಸಾವನಪ್ಪಿದ್ದಾರೆ. ಸೊರಬಾ ಮೂಗೂರಿನ ಕುಮಾರ ಅಂಬಿಗೇರಿ ಗಾಯಗೊಂಡಿದ್ದಾರೆ.
ಬೆoಗಳೆಯಿoದ ಬನವಾಸಿ ಕಡೆ ತಿಮ್ಮಪ್ಪ ದೇವಾಡಿಗ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಕುಮಾರ್ ಅಂಬಿಗೇರಿ ಇನ್ನೊಂದು ಬೈಕಿನಲ್ಲಿದ್ದರು. ಎದುರಿನಿಂದ ಬಂದ ಕುಮಾರ್ ಅವರ ಬೈಕು ತಿಮ್ಮಪ್ಪ ಅವರ ಬೈಕಿಗೆ ಡಿಕ್ಕಿಯಾಗಿದ್ದರಿಂದ ಎರಡು ಬೈಕಿನವರು ನೆಲಕ್ಕೆ ಅಪ್ಪಳಿಸಿದರು.
ಅಪಘಾತದ ರಭಸಕ್ಕೆ ಬೈಕುಗಳೆರಡು ಜಖಂ ಆಯಿತು. ಗಂಭೀರ ಗಾಯಗೊಂಡ ತಿಮ್ಮಪ್ಪ ದೇವಾಡಿಗ ಅಲ್ಲಿಯೇ ಕೊನೆ ಉಸಿರೆಳೆದರು. ಕುಮಾರ್ ಅಂಬಿಗೇರಿ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಪೊಲೀಸರು ಕುಮಾರ್ ಅಂಬಿಗೇರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.





