6

ಪ್ರಚೋದನಾಕಾರಿ ಬರಹ: ಫೇಸ್ಬುಕ್ ಬರಹಗಾರನ ವಿರುದ್ಧ ಪೊಲೀಸ್ ಪ್ರಕರಣ!

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹ ಪ್ರಕಟಿಸಿದ ಅಂಕಣಕಾರರೊಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಕರ್ಣದ ರಥಬೀದಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಹವ್ಯಾಸಿ ಬರಹಗಾರ ರಾಮಚಂದ್ರ ನಿರ್ವಾಹಣೇಶ್ವರ ಅವರು ಫೇಸ್ಬುಕ್ ಖಾತೆಯಲ್ಲಿ ತಮ್ಮ ಬರಹ ಪ್ರಕಟಿಸಿದ್ದರು. `ರಾಜ್ಯದ ಖರ್ಗೆಬಾವ ಮತ್ತು ದೆಲ್ಲಿ ರಾಜಕುಮಾರ ರಾಗಾ ಹಾಗೂ ಹೈದರಬಾದಿನ ಡಾನ್ ಓವೈಸಿ ಮನೆ ಮೇಲೆ ಒಂದೊoದು ಬಾಂಬು ಹಾಕಿ ಬಿಟ್ಟರೆ, ಮುಂದೆoದೂ ದೇಶದಲ್ಲಿ ಆ ರೀತಿ ಬಾಲ ಬಿಚ್ಚುವ ದರಿದ್ರ ಕೆಲಸ ಯಾರೂ ಮಾಡುತ್ತಿರಲಿಲ್ಲ’ ಎಂದು ಅವರು ಬರೆದುಕೊಂಡಿದ್ದರು. ಅದಾದ ನಂತರ ಆ ಬರಹವನ್ನು ಅಳಸಿದ್ದರು.

ಆದರೆ, ಗೋಕರ್ಣ ಪೊಲೀಸ್ ಸಿಬ್ಬಂದಿ ವಸಂತ ನಾಯ್ಕ ಈ ಬರಹ ಗಮನಿಸಿದರು. ಹೀಗಾಗಿ ಆಂತರಿಕ ಗಲಭೆ ಉಂಟು ಮಾಡುವ ಉದ್ದೇಶದಿಂದ ರಾಮಚಂದ್ರ ನಿರ್ವಾಹಣೇಶ್ವರ ಅವರು ಈ ಬರಹ ಪ್ರಕಟಿಸಿದ್ದಾರೆ ಎಂದು ಅವರು ಮೇಲಧಿಕಾರಿಗಳಿಗೆ ವಿವರಿಸಿದರು. ರಾಜಕೀಯ ಪಕ್ಷದ ಮುಖಂಡರ ವಿರುದ್ಧ ದ್ವೇಷ ಭಾವನೆ ಹಬ್ಬಿಸುವ ಪ್ರಚೋದನಾಕಾರಿ ಸಂದೇಶ ಬರೆದಿರುವುದು ಹಾಗೂ ರಾಜಕೀಯ ಮುಖಂಡರಿಗೆ ಅವಮಾನಿಸಿರುವ ಕಾರಣ ನೀಡಿ ರಾಮಚಂದ್ರ ನಿರ್ವಾಹಣೇಶ್ವರ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದರು.

ಗಮನಿಸಿ: ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆಯಿಂದಿರಿ!

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page